Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಶಿವಮೊಗ್ಗ - Wikipedia

ಶಿವಮೊಗ್ಗ

From Wikipedia

ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ. ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೭೫ ಕಿಮೀ ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.

ಮಹಿಷ ಮರ್ಧಿನಿ - ಶಿವಪ್ಪನಾಯಕನ ಅರಮನೆಯ ಹಿಂಭಾಗದಲ್ಲಿರುವ ಒಂದು ಶಿಲ್ಪ
ಮಹಿಷ ಮರ್ಧಿನಿ - ಶಿವಪ್ಪನಾಯಕನ ಅರಮನೆಯ ಹಿಂಭಾಗದಲ್ಲಿರುವ ಒಂದು ಶಿಲ್ಪ

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ.

ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ.

ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ
ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ

ಪರಿವಿಡಿ

[ಬದಲಾಯಿಸಿ] ಚರಿತ್ರೆ

ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ Moggu) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.

[ಬದಲಾಯಿಸಿ] ಪ್ರವಾಸೀ ತಾಣಗಳು

ಜೋಗದ ಜಲಪಾತ
ಜೋಗದ ಜಲಪಾತ

ಜಲಪಾತಗಳು ಮತ್ತು ಅಣೆಕಟ್ಟುಗಳು

  • ಜೋಗದ ಜಲಪಾತ
  • ಲಿಂಗನಮಕ್ಕೆ ಅಣೆಕಟ್ಟು
  • ವನಕೆ-ಅಬ್ಬೆ ಜಲಪಾತ
  • ಭದ್ರಾ ನದಿ ಯೋಜನೆ, ಲಕ್ಕವಳ್ಳಿ

ಗಿರಿ-ಶಿಖರಗಳು

  • ಆಗುಂಬೆ, ಆಗುಂಬೆ ಸೂರ್ಯಾಸ್ತಕ್ಕೆ ಪ್ರಸಿದ್ಧ
  • ಕೊಡಚಾದ್ರಿ, ಚಾರಣಿಗರ ಹೆಮ್ಮೆ

ಚರಿತ್ರೆ ಮತ್ತು ಧರ್ಮ

  • ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು
  • ನಗರ, ಬಿದನೂರು ಸಂಸ್ಥಾನದ ರಾಜಧಾನಿ
  • ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ
  • ಶಿವಪ್ಪ ನಾಯಕನ ಅರಮನೆ
  • ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್

ವನ್ಯಜೀವಿ

  • ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ
  • ಸಕ್ಕರೆಬೈಲು, ಆನೆ ತರಬೇತಿ ಶಿಬಿರ
  • ಮಂಡಗದ್ದೆ ಪಕ್ಷಿಧಾಮ

[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು

  • ಕೆಳದಿಯ ಚೆನ್ನಮ್ಮಾಜಿ
  • ಅಲ್ಲಮಪ್ರಭು ದೇವರು
  • ಶಿವಪ್ಪ ನಾಯಕ
  • ಅಕ್ಕಮಹಾದೇವಿ
  • ಪ್ರಫುಲ್ಲ ಚಂದ್ರ, ಕೃಷಿ ತಜ್ಞರು
  • ಕಡಿದಾಳ್ ಮಂಜಪ್ಪ, ಮಾಜಿ ಮುಖ್ಯಮಂತ್ರಿಗಳು
  • ಶಾಂತವೇರಿ ಗೋಪಾಲಗೌಡ, ಸಮಾಜವಾದಿ ನಾಯಕರು
  • ಎಸ್. ಬಂಗಾರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ
  • ಬಿ ಎಸ್ ಯಡಿಯೂರಪ್ಪ, ಈಗಿನ ಉಪ-ಮುಖ್ಯಮಂತ್ರಿಗಳು, ಮಾಜಿ ಪ್ರತಿಪಕ್ಷ ನಾಯಕರು
  • ಕೆ ಎಸ್ ಈಶ್ವರಪ್ಪ, ಮಾಜಿ ಪ್ರತಿಪಕ್ಷ ನಾಯಕರು, ಶಿವಮೊಗ್ಗದ ಶಾಸಕರು.
  • ಕಾಗೋಡು ತಿಮ್ಮಪ್ಪ, ಮಾಜಿ ಮಂತ್ರಿಗಳು
  • ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.
  • ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
  • ಪಿ.ಲಂಕೇಶ್, ಲೇಖಕ-ಪತ್ರಕರ್ತರು
  • ನಾ.ಡಿಸೋಜಾ, ಸಾಹಿತಿ
  • ಎಮ್.ಕೆ.ಇ೦ದಿರ, ಕಾದ೦ಬರಿಕಾರ್ತಿ
  • ಕೆ. ವಿ. ಸುಬ್ಬಣ, ಸಾಹಿತಿ ಮತ್ತು ನಾಟಕಕಾರ
  • ಜಿ. ಎಸ್. ಶಿವರುದ್ರಪ್ಪ, ಪ್ರಸಿದ್ದ ಕವಿ
  • ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ
  • ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ
  • ಕೆ.ಪಿ.ಪಿ,ಲೇಖಕ

[ಬದಲಾಯಿಸಿ] ತಾಲ್ಲೂಕುಗಳು

ತಾಲ್ಲೂಕು ಎತ್ತರ (ಮಿ.) ಹೋಬಳಿಗಳ ಸಂಖ್ಯೆ ನಿವಾಸಿತ ಹಳ್ಳಿಗಳ ಸಂಖ್ಯೆ ಅನಿವಾಸಿತ ಹಳ್ಳಿಗಳ ಸಂಖ್ಯೆ ವಿಸ್ತಿರಣ (ಚ. ಕಿ.ಮಿ)
 ತೀರ್ಥಹಳ್ಳಿ  ೬೧೦  ೫  ೨೪೫  ೨  ೧೨೪೭
 ಭಧ್ರಾವತಿ  ೫೯೪  ೬  ೧೪೬  ೭  ೬೯೦
 ಶಿಕಾರಿಪುರ  ೬೦೩  ೫  ೧೫೩  ೨೨  ೯೦೯
 ಶಿವಮೊಗ್ಗ  ೫೭೧  ೮  ೧೯೮  ೨೪  ೧೧೦೮
 ಸಾಗರ  ೫೭೯  ೬  ೨೩೩  ೫  ೧೯೪೦
 ಸೊರಬ  ೫೭೯  ೬  ೨೬೮  ೩೮  ೧೧೪೮
 ಹೊಸನಗರ  ೫೭೨  ೪  ೧೯೭  ೫  ೧೪೨೩


[ಬದಲಾಯಿಸಿ] ಕೆಳಗಿನ ಲೇಖನಗಳನ್ನೂ ನೋಡಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು


ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ

ಇತರ ಭಾಷೆಗಳು


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -