Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಭಾರತ - Wikipedia

ಭಾರತ

From Wikipedia

ಭಾರತ ಗಣರಾಜ್ಯ
ಭಾರತದ ಧ್ವಜ ಭಾರತೀಯ ಚಿಹ್ನೆ
(ಭಾರತೀಯ ಧ್ವಜ) (ಭಾರತೀಯ ಚಿಹ್ನೆ)
ಧ್ಯೇಯವಾಕ್ಯ: सत्यमेव जयते ("ಸತ್ಯಮೇವ ಜಯತೇ", ಸತ್ಯವೇ ಜಯಿಸುತ್ತದೆ)
(ಮುಂಡಕ ಉಪನಿಷತ್)
ಅಧಿಕೃತ ಭಾಷೆಗಳು ೨೨
ರಾಜಧಾನಿ ನವ ದೆಹಲಿ
ಅತಿ ದೊಡ್ಡ ನಗರ ಮುಂಬೈ
ಅಧ್ಯಕ್ಷರು ಡಾ. ಅಬ್ದುಲ್ ಕಲಾಮ್
ಪ್ರಧಾನ ಮಂತ್ರಿಗಳು ಡಾ. ಮನಮೋಹನ್ ಸಿಂಗ್
ವಿಸ್ತೀರ್ಣ
- ಒಟ್ಟು
೭ ನೇ ಸ್ಥಾನ
೩೨,೮೭,೫೯೦ ಚ. ಕಿಮೀ
ಜನಸಂಖ್ಯೆ
- ಒಟ್ಟು (೨೦೦೩)
- ಸಾಂದ್ರತೆ
೨ ನೇ ಸ್ಥಾನ
೧೦೬,೫೦,೭೦,೬೦೭
೩೨೪/ಚ. ಕಿಮೀ
ಸ್ವಾತಂತ್ರ್ಯ ದಿನ ಆಗಸ್ಟ್ ೧೫, ೧೯೪೭
ಗಣರಾಜ್ಯ ದಿನ ಜನವರಿ ೨೬, ೧೯೫೦
ರಾಷ್ಟ್ರಗೀತೆ ಜನ ಗಣ ಮನ
ರಾಷ್ಟ್ರೀಯ ಗಾನ ವಂದೇ ಮಾತರಮ್
ರಾಷ್ಟ್ರೀಯ ಕ್ರೀಡೆ ಹಾಕಿ
ರಾಷ್ಟ್ರೀಯ ಮೃಗ ಹುಲಿ
ರಾಷ್ಟ್ರಪಕ್ಷಿ ನವಿಲು
ರಾಷ್ಟ್ರೀಯ ಪುಷ್ಪ ಕಮಲ


ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ದೇಶ, ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಭಾರತವು ೧೦೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.

ಪರಿವಿಡಿ

[ಬದಲಾಯಿಸಿ] ಹೆಸರಿನ ವ್ಯುತ್ಪತ್ತಿ

ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಹಿಂದಿನ ಪರ್ಷಿಯನ್ ರೂಪಾಂತರ. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಕೆಲವೆಂದರೆ ಹಿಂದುಸ್ತಾನ, ಆರ್ಯಾವರ್ತ, ಭರತಖಂಡ, ಜಂಬೂದ್ವೀಪ, ಇತ್ಯಾದಿ.

[ಬದಲಾಯಿಸಿ] ಚರಿತ್ರೆ

ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ನಾಗರೀಕತೆ ಅಸ್ತಿತ್ವದಲ್ಲಿತ್ತು.

ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಬಿಸಿದವು. ಮೌರ್ಯ ಸಾಮ್ರಾಜ್ಯ ಬಾರತವನ್ನು ಸರಿಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಚಿನ್ನದ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು.

ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಗಾದವು (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ).

೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಗಾರರು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಆಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು.

ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭ ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಸ್ವತಂತ್ರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ.

[ಬದಲಾಯಿಸಿ] ಸರ್ಕಾರ ಮತ್ತು ರಾಜಕೀಯ

ಭಾರತ ಒಂದು ಪ್ರಜಾತಾಂತ್ರಿಕ ಗಣರಾಜ್ಯ. ಕೇಂದ್ರ ಸರ್ಕಾರದ ಕೆಳಗೆ ರಾಜ್ಯ ಸರ್ಕಾರಗಳು ಕೆಲಸ ಮಾಡುವ ರಾಜಕೀಯ ವ್ಯವಸ್ಥೆಯನ್ನು ಭಾರತ ಹೊಂದಿದೆ.

ಭಾರತದ ಪ್ರಥಮ ಪ್ರಜೆ ಭಾರತದ ಅಧ್ಯಕ್ಷರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಮತದಾರ ಸಮುದಾಯಗಳ ಮೂಲಕ ಪರೋಕ್ಷವಾಗಿ ಐದು ವರ್ಷಗಳ ಅವಧಿಗಳಿಗೆ ಚುನಾಯಿಸಲಾಗುತ್ತದೆ. ಸಾಂವಿಧಾನಿಕವಾಗಿ ಅಧ್ಯಕ್ಷರು ಪ್ರಥಮ ಪ್ರಜೆಯಾಗಿದ್ದರೂ, ಸರ್ಕಾರದಲ್ಲಿ ಅತಿ ಹೆಚ್ಚು ಅಧಿಕಾರವುಳ್ಳ ಸ್ಥಾನ ಭಾರತದ ಪ್ರಧಾನ ಮಂತ್ರಿಗಳದ್ದು. ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷ ಅಥವಾ ಪಕ್ಷಗಳ ಮೈತ್ರಿತ್ವ ಪ್ರಧಾನ ಮಂತ್ರಿಯನ್ನು ಚುನಾಯಿಸುತ್ತದೆ. ಪ್ರಧಾನ ಮಂತ್ರಿಗಳು ತಮ್ಮ ಸಹಾಯಕ್ಕೆ ಮಂತ್ರಿಮಂಡಲ (ಅಥವಾ "ಸಂಪುಟ") ವನ್ನು ಏರ್ಪಡಿಸುತ್ತಾರೆ.

ಭಾರತದ ಸಂಸತ್ತಿನ ಎರಡು ಸಭೆಗಳೆಂದರೆ ಲೋಕಸಭೆ ಮತ್ತು ರಾಜ್ಯಸಭೆ. ಲೋಕಸಭೆಯ ಸದಸ್ಯರು ನೇರ ಚುನಾವಣೆಗಳಲ್ಲಿ ಚುನಾಯಿತರಾದರೆ, ರಾಜ್ಯಸಭೆಯ ಸದಸ್ಯರನ್ನು ಪರೋಕ್ಷವಾಗಿ ಚುನಾಯಿಸಲಾಗುತ್ತದೆ.

ಭಾರತದ ಈಗಿನ ಪ್ರಧಾನ ಮಂತ್ರಿಗಳು ಕಾಂಗ್ರೆಸ್ ಪಕ್ಷದ ಡಾ. ಮನಮೋಹನ್ ಸಿಂಗ್. ಅಧ್ಯಕ್ಷರು ಡಾ. ಎ ಪಿ ಜೆ ಅಬ್ದುಲ್ ಕಲಮ್.

[ಬದಲಾಯಿಸಿ] ಭೂಗೋಳ

ಭಾರತದ ನಕ್ಷೆ
ಭಾರತದ ನಕ್ಷೆ

ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು:

ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಗಂಗಾ, ಬ್ರಹ್ಮಪುತ್ರಾ, ಯಮುನಾ, ಗೋದಾವರಿ, ಕೃಷ್ಣಾ, ಕಾವೇರಿ.

[ಬದಲಾಯಿಸಿ] ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ:

  • ೨೮ ರಾಜ್ಯಗಳು
  • ೬ ಕೇಂದ್ರಾಡಳಿತ ಪ್ರದೇಶಗಳು
  • ರಾಷ್ಟ್ರೀಯ ರಾಜಧಾನಿ: ನವ ದೆಹಲಿ
ಭಾರತದ ರಾಜ್ಯಗಳು
ಭಾರತದ ರಾಜ್ಯಗಳು

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಮ್
  4. ಬಿಹಾರ್
  5. ಚತ್ತೀಸ್‍ಗಢ
  6. ಗೋವ
  7. ಗುಜರಾತ್
  8. ಹರ್ಯಾಣಾ
  9. ಹಿಮಾಚಲ ಪ್ರದೇಶ
  10. ಜಮ್ಮು ಮತ್ತು ಕಾಶ್ಮೀರ
  11. ಜಾರ್ಖಂಡ್
  12. ಕರ್ನಾಟಕ
  13. ಕೇರಳ
  14. ಮಧ್ಯ ಪ್ರದೇಶ
  1. ಮಹಾರಾಷ್ಟ್ರ
  2. ಮಣಿಪುರ
  3. ಮೇಘಾಲಯ
  4. ಮಿಜೋರಮ್
  5. ನಾಗಾಲ್ಯಾಂಡ್
  6. ಒರಿಸ್ಸಾ
  7. ಪಂಜಾಬ್
  8. ರಾಜಸ್ಥಾನ
  9. ಸಿಕ್ಕಿಮ್
  10. ತಮಿಳುನಾಡು
  11. ತ್ರಿಪುರ
  12. ಉತ್ತರಾಂಚಲ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ಕೇಂದ್ರಾಡಳಿತ ಪ್ರದೇಶಗಳು:

ರಾಜಧಾನಿ: ನವ ದೆಹಲಿ.

[ಬದಲಾಯಿಸಿ] ಆರ್ಥಿಕ ವ್ಯವಸ್ಥೆ

ಮುಖ್ಯ ಲೇಖನ: ಭಾರತದ ಆರ್ಥಿಕ ವ್ಯವಸ್ಥೆ

ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು, ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ನಾಲ್ಕನೆಯ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ.

ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಿತ್ರಗಳು ಹಾಗೂ ಕುಶಲ ಕೆಲಸಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ.

ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ಯುರೋಪಿಯನ್ ಒಕ್ಕೂಟ ಮತ್ತು ಜಪಾನ್.

[ಬದಲಾಯಿಸಿ] ಜನಸಂಖ್ಯಾ ಅಂಕಿ ಅಂಶಗಳು

ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ನಾಲ್ಕು ಅತಿ ದೊಡ್ಡ ನಗರಗಳೆಂದರೆ ಮುಂಬೈ, ದೆಹಲಿ, ಕೋಲ್ಕಾಟಾ (ಕಲ್ಕತ್ತೆ) ಮತ್ತು ಚೆನ್ನೈ.

ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮.

ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩  %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರಸಿ, ಅಹ್ಮದಿ ಮತ್ತು ಬಹಾ-ಈ.

ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ಇತರ ಭಾಷೆಗಳು


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -