ಇಂದಿರಾ ಗಾಂಧಿ
From Wikipedia
ಇಂದಿರಾ ಪ್ರಿಯದರ್ಶಿನಿ ಗಾಂಧಿ (ನವೆಂಬರ್ ೧೬, ೧೯೧೭ — ಅಕ್ಟೋಬರ್ ೩೧, ೧೯೮೪) ಭಾರತದ ಮಾಜಿ ಪ್ರಧಾನಮಂತ್ರಿಗಳಲ್ಲೊಬ್ಬರು. ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಹಾಗೂ ಕಮಲಾ ನೆಹರು ಅವರ ಮಗಳು. ಭಾರತದ ಮತ್ತೊಬ್ಬ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ತಾಯಿ.
ಇವರ ವಂಶವನ್ನು ಕಾಶ್ಮೀರಿ ಪಂಡಿತರೊಂದಿಗೆ ಗುರುತಿಸುತ್ತಾರೆ. ಇವರ ತಾತನವರಾದ ಮೋತಿಲಾಲ್ ನೆಹರು ಅವರು ಅಲಹಾಬಾದ್ನಲ್ಲಿ ಪ್ರತಿಷ್ಠಿತರಾದ ನ್ಯಾಯವಾದಿಗಳಾಗಿದ್ದರು.