Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಗಿರೀಶ್ ಕಾಸರವಳ್ಳಿ - Wikipedia

ಗಿರೀಶ್ ಕಾಸರವಳ್ಳಿ

From Wikipedia

ಗಿರೀಶ್ ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ

ಗಿರೀಶ್ ಕಾಸರವಳ್ಳಿ ಭಾರತದ ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. ಮೂಲತಃ ಕರ್ನಾಟಕ ರಾಜ್ಯದ ಶಿವಮೊಗ್ಗದವರಾದ ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೦ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅ೦ತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ. ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು) ನಂತರ ಅತಿ ಹೆಚ್ಚು ಸ್ವರ್ಣ ಕಮಲಗಳನ್ನು ಪಡೆದವರಾಗಿದ್ದಾರೆ. ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. ನೀನಾಸಂ ರಂಗಶಾಲೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.

[ಬದಲಾಯಿಸಿ] ಚಿತ್ರಗಳು

 ಹೆಸರು  ವರ್ಷ  ಪ್ರಶಸ್ತಿ
 ಘಟಶ್ರಾದ್ಧ
 ೧೯೭೭   ಸ್ವರ್ಣ ಕಮಲ ಪ್ರಶಸ್ತಿ 
 ಆಕ್ರಮಣ
 ೧೯೭೯  
 ಮೂರು ದಾರಿಗಳು     ೧೯೮೧  
 ತಬರನ ಕಥೆ  ೧೯೮೭  ಸ್ವರ್ಣ ಕಮಲ ಪ್ರಶಸ್ತಿ 
 ಬಣ್ಣದ ವೇಷ  ೧೯೮೯  
 ಮನೆ   ೧೯೮೯  
 ಕ್ರೌರ್ಯ     ೧೯೯೬  
 ತಾಯಿ ಸಾಹೇಬ  ೧೯೯೮  ಸ್ವರ್ಣ ಕಮಲ ಪ್ರಶಸ್ತಿ 
 ದ್ವೀಪ     ೨೦೦೨  ಸ್ವರ್ಣ ಕಮಲ ಪ್ರಶಸ್ತಿ 
 ಹಸೀನಾ     ೨೦೦೫  ಉತ್ತಮ ಕುಟುಂಬ ಕಲ್ಯಾಣ ಚಿತ್ರ 
 ನಾಯಿ ನೆರಳು     ೨೦೦೬  ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ 


ಕನ್ನಡ ಚಲನಚಿತ್ರ ನಿರ್ದೇಶಕರು

ವೈ.ವಿ.ರಾವ್ | ಎಂ.ಆರ್.ವಿಠಲ್ | ಹೆಚ್.ಎಲ್.ಎನ್. ಸಿಂಹ | ಡಿ.ಶಂಕರ್ ಸಿಂಗ್ | ಬಿ.ಆರ್.ಪಂತುಲು | ಕಣಗಾಲ್ ಪ್ರಭಾಕರ ಶಾಸ್ತ್ರಿ | ಜಿ.ವಿ.ಅಯ್ಯರ್ | ಆರ್.ನಾಗೇಂದ್ರರಾಯ | ಬಿ.ಎಸ್.ರಂಗಾ | ಆರ್.ಎನ್.ಜಯಗೋಪಾಲ್ | ಗೀತಪ್ರಿಯ | ಹುಣಸೂರು ಕೃಷ್ಣಮೂರ್ತಿ | ಆರೂರು ಪಟ್ಟಾಭಿ | ಸಿದ್ಧಲಿಂಗಯ್ಯ | ಪುಟ್ಟಣ್ಣ ಕಣಗಾಲ್ | ಗಿರೀಶ್ ಕಾರ್ನಾಡ್ | ಎಂ.ಎಸ್.ರಾಜಶೇಖರ್ | ಬಿ ವಿ ಕಾರ೦ತ | ಪ್ರೇಮಾ ಕಾರಂತ | ಗಿರೀಶ್ ಕಾಸರವಳ್ಳಿ | ನಾಗತಿಹಳ್ಳಿ ಚಂದ್ರಶೇಖರ್ | ನಾಗಾಭರಣ | ಟಿ. ಪಟ್ಟಾಭಿರಾಮ ರೆಡ್ಡಿ | ಸುರೇಶ್ ಹೆಬ್ಳೀಕರ್ | ಭಾರ್ಗವ | ರಾಜೇಂದ್ರಸಿಂಗ್ ಬಾಬು | ಡಿ.ರಾಜೇಂದ್ರ ಬಾಬು | ದೊರೈ-ಭಗವಾನ್ | ಎನ್. ಲಕ್ಷ್ಮಿ ನಾರಾಯಣ್ | ಕೆ.ಎಸ್.ಎಲ್.ಸ್ವಾಮಿ(ರವೀ) | ತಿಪಟೂರು ರಘು | ಕೆ.ಬಾಲಚಂದರ್ | ಮಣಿರತ್ನಂ | ಶಂಕರ್ ನಾಗ್ | ಸಿಂಗೀತಂ ಶ್ರೀನಿವಾಸ ರಾವ್ | ಜೋಸೈಮನ್ | ರಮೇಶ್ ಭಟ್ | ರವಿಚಂದ್ರನ್ | ಕಾಶೀನಾಥ್ | ಫಣಿ ರಾಮಚಂದ್ರ | ಪಿ.ಹೆಚ್.ವಿಶ್ವನಾಥ್ | ಎಸ್.ನಾರಾಯಣ್ | ಓಂಪ್ರಕಾಶ್ ರಾವ್ | ಉಪೇಂದ್ರ | ಸುನೀಲ್ ಕುಮಾರ್ ದೇಸಾಯಿ | ಪ್ರೇಂ | ಮಹೇಂದರ್ | ಓಂ ಸಾಯಿಪ್ರಕಾಶ್ | ವಿ.ಮನೋಹರ್ | ಸುದೀಪ್ | ರಮೇಶ್ | ಮಾ.ಕಿಶನ್ | ಕವಿತಾ ಲಂಕೇಶ್| ಪಿ ಲಂಕೇಶ್ | ಇಂದ್ರಜಿತ್ ಲಂಕೇಶ್ | ರವಿ ಶ್ರೀವತ್ಸ | ಜಯಂತಿ | ಆರತಿ | ಲಕ್ಷ್ಮಿ | ಲೋಕೇಶ್ | ಟಿ.ವಿ.ಸಿಂಗ್ ಠಾಕೂರ್ | ವೈ.ಆರ್.ಸ್ವಾಮಿ |

ಇತರ ಭಾಷೆಗಳು


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -