Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಹಾಸನ - Wikipedia

ಹಾಸನ

From Wikipedia

ಶಿಲ್ಪಕಲೆಯಿಂದಾಗಿ ಜಗತ್ಪ್ರಸಿದ್ಧವಾವಿರುವ ಬೇಲೂರಿನ ಚೆನ್ನಕೇಶ್ವರ ದೇವಾಲಯ
ಶಿಲ್ಪಕಲೆಯಿಂದಾಗಿ ಜಗತ್ಪ್ರಸಿದ್ಧವಾವಿರುವ ಬೇಲೂರಿನ ಚೆನ್ನಕೇಶ್ವರ ದೇವಾಲಯ

ಹಾಸನ ಭಾರತದ ಕರ್ನಾಟಕ ರಾಜ್ಯದ ನಗರ ಮತ್ತು ಅದೇ ಹೆಸರಿನ ಜಿಲ್ಲೆಯ ರಾಜಧಾನಿ. ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರದ (ಇಸ್ರೋ) ಪ್ರಧಾನ ನಿಯಂತ್ರಣ ಕೇಂದ್ರ ಹಾಸನದಲ್ಲಿದೆ.

ಪರಿವಿಡಿ

[ಬದಲಾಯಿಸಿ] ಚರಿತ್ರೆ

ಹಾಸನ ಜಿಲ್ಲೆಯ ಚರಿತ್ರೆಯನ್ನು ಅಧಿಕೃತವಾಗಿ ಸುಮಾರು ೫ನೇ ಶತಮಾನದಿಂದಲೇ ಗುರುತಿಸಬಹುದು. ಕದಂಬ ಕಾಕುಸ್ಥವರ್ಮನ ಕಾಲದ ಹಲ್ಮಿಡಿ ಶಾಸನವೇ ಇದಕ್ಕೆ ಸಾಕ್ಷಿ. ನಂತರ, ೧೧ ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯ ಈ ಜಿಲ್ಲೆಯಲ್ಲೇ ಹುಟ್ಟಿ ಮೆರೆಯಿತು. ೧೧ ನೇ ಶತಮಾನದಿಂದ ೧೪ ನೇ ಶತಮಾನದ ವರೆಗೆ ಆಳಿದ ಹೊಯ್ಸಳರ ರಾಜಧಾನಿ ದ್ವಾರಸಮುದ್ರ - ಈಗ ಹಾಸನದ ಬಳಿ ಇರುವ ಹಳೇಬೀಡಿನಲ್ಲಿ ಇದರ ಅವಶೇಷಗಳನ್ನು ಕಾಣಬಹುದು. ಪ್ರಾರಂಭದ ಹೊಯ್ಸಳ ಅರಸರು ಜೈನ ಧರ್ಮವನ್ನು ಪಾಲಿಸಿದರಾದರೂ, ಅವರು ಎಲ್ಲ ಧರ್ಮಾವಲಂಬಿಗಳಿಗೂ ಒಂದೇ ದೃಷ್ಟಿಯಿಂದ ನೋಡುತ್ತಿದ್ದರೆಂದು ಹೇಳಲಾಗಿದೆ. ಹೊಯ್ಸಳ ಅರಸರು ಶಿವನಿಗೆ, ವಿಷ್ಣುವಿಗೆ ಈ ಜಿಲ್ಲೆಯಲ್ಲಿ ಕಟ್ಟಿಸಿರುವ ಹಲವಾರು ದೇವಾಲಯಗಳು ಇದಕ್ಕೆ ಸಾಕ್ಷಿಯಾಗಿವೆ.

[ಬದಲಾಯಿಸಿ] ಶಾಸನಗಳು

ಕನ್ನಡದ ಮೊದಲ ಶಾಸನವು ಹಾಸನ ಜಿಲ್ಲೆಯ ಬೇಲೂರು ತಾಲ್ಲುಕಿನ ಹಲ್ಮಿಡಿ ಎಂಬ ಗ್ರಾಮದಲ್ಲಿ ದೊರೆತಿದೆ. ಇದು ಹಲ್ಮಿಡಿ ಶಾಸನ ಎಂದು ಪ್ರಸಿದ್ದ. ಈ ಜಿಲ್ಲೆಯ ಶ್ರವಣಬೆಳಗೊಳವು ಕರ್ನಾಟಕದಲ್ಲೇ ಅತಿ ಹೆಚ್ಚು ಶಿಲಾಶಾಸನಗಳು ದೊರೆತಿರುವ ಸ್ಥಳ. ಅತಿ ಹಳೆಯ ಮರಾಠಿ ಶಾಸನ ಕೂಡ ಶ್ರವಣಬೆಳಗೊಳದಲ್ಲೇ ದೊರೆತಿದೆ.

[ಬದಲಾಯಿಸಿ] ಹೆಸರಿನ ಬಗ್ಗೆ

ಹಾಸನ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ:

೧) ಮೊದಲಿನ ಹೆಸರು ಸಿಂಹಾಸನಪುರಿ ಇಂದ ಬಂದಿದೆ ಎಂದು,
೨) ಹಾಸನ ನಗರದಲ್ಲಿರುವ ನೆಲೆಸಿರುವ ಹಾಸನಾಂಬೆ ದೇವಿಯ ಹೆಸರಿನಿಂದ ಬಂದಿದೆ ಎಂದು

[ಬದಲಾಯಿಸಿ] ಹಾಸನ ಜಿಲ್ಲೆ

ಹಾಸನ ಜಿಲ್ಲೆಯ ಉತ್ತರಪೂರ್ವಕ್ಕೆ ತುಮಕೂರು ಜಿಲ್ಲೆ, ದಕ್ಷಿಣಪೂರ್ವಕ್ಕೆ ಮಂಡ್ಯ, ದಕ್ಷಿಣಕ್ಕೆ ಮೈಸೂರು, ದಕ್ಷಿಣಪಶ್ಚಿಮಕ್ಕೆ ಕೊಡಗು, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಮತ್ತು ಉತ್ತರ ಪಶ್ಚಿಮಕ್ಕೆ ಚಿಕ್ಕಮಗಳೂರು ಜಿಲ್ಲೆಗಳಿವೆ. ಹಾಸನ ಜಿಲ್ಲೆಯ ವಿಸ್ತೀರ್ಣ ೬೮೧೪ ಚ.ಕಿಮೀ, ಮತ್ತು ೨೦೦೧ ರ ಜನಗನತಿಯ ಪ್ರಕಾರ ಜನಸಂಖ್ಯೆ ೧೭,೨೧,೩೧೯. ಇದು ೧೯೯೧ ರ ಜನಸಂಖ್ಯೆಗಿಂತ ಶೇ. ೯.೬೬ ರಷ್ಟು ಹೆಚ್ಚು.

[ಬದಲಾಯಿಸಿ] ಭೌಗೋಳಿಕ

ಹಾಸನ ಜಿಲ್ಲೆಯಲ್ಲಿ ಎರಡು ಮುಖ್ಯ ಭೌಗೋಳಿಕ ಭಾಗಗಳಿವೆ: ಮಲೆನಾಡು - ಇದು ಪಶ್ಚಿಮ ಘಟ್ಟಗಳ ಎತ್ತರದ ಶಿಖರಗಳಲ್ಲಿ ಕೆಲವನ್ನು ಒಳಗೊಂಡಿದೆ; ಹಾಗೂ ಬಯಲುಸೀಮೆ, ದಕ್ಷಿಣದ ಕಡೆಗೆ ಸ್ವಲ್ಪ ಇಳಿಜಾರಿನಲ್ಲಿರುವ ಪ್ರದೇಶ. ಈ ಜಿಲ್ಲೆಯ ಮುಖ್ಯ ನದಿ ಹೇಮಾವತಿ, ಮುಂದೆ ಇದು ಕಾವೇರಿ ನದಿಯನ್ನು ಸೇರುತ್ತದೆ. ಪಶ್ಚಿಮ ಘಟ್ಟಗಳ ಮಲೆನಾಡು ಪ್ರದೇಶದಲ್ಲಿ ದಟ್ಟವಾದ ಕಾಡುಗಳು ಹಾಗೂ ವನ್ಯಜೀವ ಯಥೇಚ್ಛವಾಗಿದೆ. ಕೃಷಿಯ ದೃಷ್ಟಿಯಿಂದ, ಹಾಸನ ಜಿಲ್ಲೆಯಲ್ಲಿ ಫಲವತ್ತಾದ ಕೆಮ್ಮಣ್ಣು ಇದೆ. ಇಲ್ಲಿ ಅನೇಕ ಕಾಫಿ ತೋಟಗಳಿದ್ದು, ಮೊದಲ ಕಾಫಿ ತೋಟವನ್ನು ೧೮೪೩ ರಲ್ಲಿ ಸ್ಥಾಪಿಸಲಾಗಿತ್ತು.

ಆಡಳಿತಕ್ಕೋಸ್ಕರ,ಹಾಸನ ಜಿಲ್ಲೆಯನ್ನು ಎಂಟು ತಾಲೂಕುಗಳಾಗಿ ವಿಂಗಡಿಸಲಾಗಿದೆ.

ಹಾಸನ

ಅರಸೀಕೆರೆ

ಚನ್ನರಾಯಪಟ್ಟಣ

ಹೊಳೇನರಸೀಪುರ

ಅರಕಲಗೂಡು

ಬೇಲೂರು

ಸಕಲೇಶಪುರ

ಆಲೂರು

[ಬದಲಾಯಿಸಿ] ಪ್ರವಾಸಿ ಸ್ಥಳಗಳು

ಹಾಸನ ಜಿಲ್ಲೆಯಲ್ಲಿ ಅನೇಕ ಮುಖ್ಯ ಪ್ರವಾಸಿ ತಾಣಗಳು ಇವೆ. ಶ್ರವಣಬೆಳಗೊಳದಲ್ಲಿ ಇರುವ ಗೊಮ್ಮಟೇಶ್ವರನ ಬೃಹತ್ ಕಲ್ಲಿನ ಪ್ರತಿಮೆ ೫೭ ಅಡಿ ಎತ್ತರವಿದ್ದು, ಒಂದೇ ಕಲ್ಲಿನಲ್ಲಿ ಕಡೆಯಲ್ಪಟ್ಟ ಅತಿ ದೊಡ್ಡ ವಿಗ್ರಹವಾಗಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ ಮತ್ತು ಬೇಲೂರಿನ ಚನ್ನಕೇಶವ ದೇವಸ್ಥಾನ ಹೊಯ್ಸಳ ಶಿಲ್ಪಕಲೆಯ ಎರಡು ಉದಾಹರಣೆಗಳು.

[ಬದಲಾಯಿಸಿ] ಸಂಪರ್ಕ

ಹಾಸನಕ್ಕೆ ಉತ್ತಮ ರೈಲ್ವೇ ಸಂಪರ್ಕವಿದ್ದು, ಹಾಸನ ಮುಖ್ಯವಾದ ರೈಲ್ವೆ ಜಂಕ್ಷನ್ ಆಗಿದೆ. ಹಾಸನದಿಂದ ರೈಲ್ವೆ ಸಂಪರ್ಕ ಮಂಗಳೂರು, ಮೈಸೂರು, ತುಮಕೂರು, ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ ಮೊದಲಾದ ನಗರಗಳಿದೆ ಉಂಟು.

[ಬದಲಾಯಿಸಿ] ಹೊರಗಿನ ಸಂಪರ್ಕಗಳು

೧) ಅಧಿಕೃತ ತಾಣ

ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ

ಇತರ ಭಾಷೆಗಳು


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -