Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಸೇಡಿಯಾಪು ಕೃಷ್ಣಭಟ್ಟ - Wikipedia

ಸೇಡಿಯಾಪು ಕೃಷ್ಣಭಟ್ಟ

From Wikipedia

ಸೇಡಿಯಾಪು ಕೃಷ್ಣಭಟ್ಟರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕನ್ನಡ ವ್ಯಾಕರಣದ ಬಗ್ಗೆ, ಛಂದಸ್ಸಿನ ಬಗ್ಗೆ ವಿಶೇಷವಾದ ಅಧ್ಯಯನಗಳನ್ನು ನಡೆಸಿ, ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ.

[ಬದಲಾಯಿಸಿ] ಜೀವನ

೧೯೦೨ ಜೂನ್ ೮ ರಂದು ಪುತ್ತೂರು ತಾಲೂಕಿನ ಸೇಡಿಯಾಪು ಎನ್ನುವ ಗ್ರಾಮದಲ್ಲಿ ಜನಿಸಿದರು. ತಂದೆ ಪಂಜಿಗುಡ್ಡೆ ರಾಮಭಟ್ಟರು, ತಾಯಿ ಮೂಕಾಂಬಿಕೆ. ನಾಲ್ಕನೆಯ ತರಗತಿಯವರೆಗೆ ಮಾತ್ರ ಓದಿದ ಸೇಡಿಯಾಪು ಮನೆತನದ ಆರ್ಥಿಕ ಸ್ಥಿತಿಯಿಂದಾಗಿ ಓದು ನಿಲ್ಲಿಸಬೇಕಾಯಿತು.

ಸ್ವಾತಂತ್ರ್ಯ ಚಳುವಳಿಯತ್ತ ಆಕರ್ಷಿತರಾದ ಸೇಡಿಯಾಪು ಗ್ರಾಮಸೇವೆ ಹಾಗು ಖಾದಿಪ್ರಚಾರಗಳಲ್ಲಿ ತೊಡಗಿದರು.ಆ ಬಳಿಕ ವೀರಕಂಬ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಕೈಗೊಂಡರು.ಆ ಶಾಲೆ ಬ್ರಿಟಿಷ್ ಸರಕಾರದ ಕೈ ಸೇರಿದಾಗ ಅಲ್ಲಿಂದ ಹೊರಬಿದ್ದರು.

೧೯೨೯ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದು ಸೇಂಟ ಅಲೋಸಿಯಸ್ ಸಂಸ್ಥೆ ಸೇರಿ, ಉಪನ್ಯಾಸಕರಾಗಿ ನಿವೃತ್ತರಾದರು.

[ಬದಲಾಯಿಸಿ] ಕೃತಿಗಳು ಮತ್ತು ಪ್ರಶಸ್ತಿ ಪುರಸ್ಕಾರಗಳು

ಚಂದ್ರಖಂಡ ಮತ್ತು ಇತರ ಕಾವ್ಯಗಳು ಇವರ ಮಹತ್ವದ ಕಾವ್ಯಸಂಗ್ರಹ, 'ಪಳಮೆಗಳು' ಕಥಾ ಸಂಕಲನ.

ಇವರು ಬರೆದ ವಿಚಾರ ಪ್ರಪಂಚ ಕೃತಿಗೆ ೧೯೯೪ರಲ್ಲಿ ಪಂಪ ಪ್ರಶಸ್ತಿ ಲಭಿಸಿತು.

ಛಂದೋಗತಿ ಕೃತಿಗೆ ವರ್ಧಮಾನ ಪ್ರಶಸ್ತಿ ದೊರೆತಿದೆ.

ಕೆಲವು ದೇಶನಾಮೆಗಳು ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸ್ವರ್ಣಮಹೋತ್ಸವ ಪುರಸ್ಕಾರ ಲಭಿಸಿದೆ.

ಕನ್ನಡ ಛಂದಸ್ಸುಗಳು ಇವರ ಮತ್ತೊಂದು ಮಹತ್ವದ ಕೃತಿ.

೧೯೭೨ರಲ್ಲಿ ಕರ್ನಾಟಕ ಸರ್ಕಾರ ಇವರನ್ನು ಶ್ರೇಷ್ಠ ವಿದ್ವಾಂಸರೆಂದು ಗೌರವಿಸಿದೆ.


[ಬದಲಾಯಿಸಿ] ನಿಧನ

೧೯೯೬ರಲ್ಲಿ ತಮ್ಮ ಜನ್ಮದಿನದಂದೇ(ಜೂನ್ ೮) ಸೇಡಿಯಾಪು ಕೃಷ್ಣಭಟ್ಟರು ನಿಧನರಾದರು.


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -