Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ವಿಜಯದಾಸರು - Wikipedia

ವಿಜಯದಾಸರು

From Wikipedia

ವಿಜಯದಾಸರು
ವಿಜಯದಾಸರು

ವಿಜಯದಾಸರು (೧೬೮೨ - ೧೭೫೫) ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.

[ಬದಲಾಯಿಸಿ] ಜೀವನ

ರಾಯಚೂರು ಜಿಲ್ಲೆ, ಮಾನವಿ ತಾಲೂಕಿನಲ್ಲಿರುವ ಚೀಕಲಪರವಿಯಲ್ಲಿ ಜನನ. ವಿಜಯದಾಸರ ಮೂಲ ಹೆಸರು ದಾಸಪ್ಪ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಡುಬಡತನ ಅನುಭವಿಸುತ್ತಿದ್ದ ಕುಟುಂಬ ಇವರದು. ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕಾರ.

ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಇವರಿಗೆ ಹರಿದಾಸ ದೀಕ್ಷೆಯನ್ನಿತ್ತು, ವಿಜಯವಿಠಲ ಎಂಬ ಅಂಕಿತವನ್ನು ಕೊಟ್ಟರೆಂದು ಹೇಳಲಾಗುತ್ತದೆ. ಸುಮಾರು ೨೫,೦೦೦ ಸುಳಾದಿಗಳು, ಉಗಾಭೋಗಗಳನ್ನು ವಿಜಯದಾಸರು ರಚಿಸಿದ್ದಾರೆ. ಹರಿದಾಸ ಪಂಥದ ಮತ್ತೊಬ್ಬ ಪ್ರಮುಖರಾದ ಗೋಪಾಲದಾಸರು ವಿಜಯದಾಸರ ಶಿಷ್ಯರು.

ಆಂದ್ರಪ್ರದೇಶ ದ ಚಿಪ್ಪಗಿರಿಯಲ್ಲಿ ಇವರ ಬೃಂದಾವನವಿದ್ದು, ಪ್ರತಿ ವರ್ಷ ಕಾರ್ತೀಕ ಶುಕ್ಲ ದಶಮಿ ದಿನದಂದು ಆರಾಧನೆ ನಡೆಸಲಾಗುತ್ತದೆ.

[ಬದಲಾಯಿಸಿ] ಪಂಚರತ್ನ ಸುಳಾದಿಗಳು

  • ನರಸಿಂಹ ಸುಳಾದಿ
  • ದುರ್ಗಾ ಸುಳಾದಿ
  • ಕಪಿಲ ಸುಳಾದಿ
  • ಧನ್ವಂತರಿ ಸುಳಾದಿ
  • ಮುಖ್ಯಪ್ರಾಣ ಸುಳಾದಿ


ವಿಜಯದಾಸರ ಒಂದು ಅಪರೂಪದ ದೇವರನಾಮ ಇಲ್ಲಿದೆ. ವಿಜಯದಾಸರು ತಿರುಪತಿ ಶ್ರೀನಿವಾಸನ ದರ್ಶನಕ್ಕೆಂದು ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ಇದನ್ನು ರಚಿಸಿದ್ದು ಎಂದು ಹೇಳಲಾಗುತ್ತದೆ. ನಿಂದಾಸ್ತುತಿಗಳ ಪ್ರಕಾರಕ್ಕೆ ಸೇರುವ ರಚನೆಯಿದು -


ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ
ಕೊಳಗದಲಿ ಹಣಗಳನು ಅಳೆದು ಕೊಂಬ
ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ
ಎಲ್ಲವನು ಕಸುಕೊಂಬ ಕಳ್ಳದೊರೆಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು
ತನ್ನ ಗುಡಿಯ ಪೊಕ್ಕ ಜನರಿಗೆಲ್ಲ
ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ
ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|

ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ
ದುಡ್ಡು ಕಾಸುಗಳಿಗೆ ಕೈಯ ನೀಡಿ
ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು
ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ
ಜಯ ಮಂಗಳಂ| ನಿತ್ಯ ಶುಭ ಮಂಗಳಂ|


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -