Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಭಾರತದಲ್ಲಿ ಹತ್ತಿ - Wikipedia

ಭಾರತದಲ್ಲಿ ಹತ್ತಿ

From Wikipedia

ನಮ್ಮ ದೇಶದ ಹತ್ತಿಯನ್ನು "ದೇಸಿ ಹತ್ತಿ" ಎಂದು ಕರೆಯುತ್ತಾರೆ. ಇದು [G. Arboreum ] ಮತ್ತು [G. Herbaceum] ಪ್ರಜಾತಿಯ ಹತ್ತಿಗಳನ್ನು ಒಳಗೊಂಡಿದೆ. ಇದರ Fibres (ತಂತುಗಳು) ಚಿಕ್ಕದಾಗಿಯೂ ಸ್ವಲ್ಪ ಒರಟಾಗಿಯೂ ಇರುತ್ತವೆ. ತಂತು-ಶಕ್ತಿಯೂ ಕಡಿಮೆ. ಆದ್ದರಿಂದ ತಯಾರಾದ ಬಟ್ಟೆಗಳು ಒರಟಾಗಿರುವುದು ಸ್ವಾಭಾವಿಕ. ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ.

ಪರಿವಿಡಿ

[ಬದಲಾಯಿಸಿ] ಪ್ರಾಚೀನ ಭಾರತದ ಹತ್ತಿ ತಂತ್ರಜ್ಞಾನಕೌಶಲ್ಯಗಳು

ಪ್ರಾಚೀನ ಭಾರತದ ಹತ್ತಿ ತಂತ್ರಜ್ಞಾನ ಕೌಶಲ, ವಿಶ್ವದ ಎಲ್ಲ ಜನಾಂಗದವರನ್ನೂ ದಂಗುಬಡಿಸಿತ್ತು. ಪ್ರಮುಖವಾಗಿ ಯೂರೋಪಿಯನ್ನರನ್ನು. ಅವರು ಬಳಸುತ್ತಿದ್ದದ್ದು, ಉಣ್ಣೆ ಮತ್ತು ಲಿನನ್ ನಾರಿನ ವಸ್ತ್ರಗಳನ್ನು. ಸಮುದ್ರನಾವಿಕರು, ಯಾತ್ರಿಗಳಿಂದ ನಮ್ಮದೇಶದ ಹತ್ತಿಬಟ್ಟೆಗಳ ಮತ್ತು ಕರಕುಶಲ ವಸ್ತುಗಳ, ಸಾಂಬಾರ ಪದಾರ್ಥಗಳ ವಿಷಯವನ್ನು ಅವರು ತಿಳಿದುಕೊಂಡಿದ್ದರು. ಆದರೆ ಮರದ ಮೇಲಿನ ಹತ್ತಿಯನ್ನು ಬಿಡುವ ಕುರಿಗಳ ಬಗ್ಗೆ ಪ್ರಚಾರದಲ್ಲಿದ್ದ ದಂತಕಥೆಗಳನ್ನು ಕೇಳಿ, ಅದರ ನೈಜತೆಯನ್ನು ಅರಿಯುವುದು ಅವರಿಗೆ ಇದ್ದ ವಿಶೇಷ ಆಸಕ್ತಿಗಳಲ್ಲೊಂದು. ಭಾರತವನ್ನು ನೋಡಲು ಬಂದ ಬಹುತೇಕ ಯಾತ್ರಿಗಳು, ಹತ್ತಿಯಬಗ್ಗೆ ತಮ್ಮ ಅಮೂಲ್ಯ ಜ್ಞಾನಾರ್ಜನೆ ಮಾಡಿಕೊಳ್ಳದೆ ವಾಪಸ್ ಹೋಗುತ್ತಿರಲಿಲ್ಲ.

ಮೊಘಲರ ಕಾಲದಲ್ಲಿ ಹತ್ತಿ - ವಸ್ತ್ರೋದ್ಯಮ, ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಮುಂದೆ ಯೂರೋಪಿಯನ್ನರು ನಮ್ಮ ದೇಶವನ್ನು ಆಳಲು ಪ್ರಾರಂಭಿಸಿದಾಗಿನಿಂದ ಅದರ ವ್ಯಾಪ್ತಿ ಮುಗಿಲನ್ನು ಮುಟ್ಟುವಷ್ಟು ತ್ವರಿತಗತಿಯಿಂದ ಸಾಗುತ್ತಿದೆ. ಹಾಗೆಯೇ ಇಂದು ವಿಶ್ವದ ಹಲವುದೇಶಗಳು, ಹತ್ತಿ ಮತ್ತು ಹತ್ತಿಗೆ ಸಂಬಂಧ ಪಟ್ಟ ಉದ್ಯಮಗಳಲ್ಲಿ ತೊಡಗಿದ್ದಾರೆ. ಹತ್ತಿಯ ಕೃಷಿಯ ಅನುಭವವೇ ಇಲ್ಲದ ಆಷ್ಟ್ರೇಲಿಯದಂತಹ ರಾಷ್ಟ್ರಗಳು ಕೂಡ ಹತ್ತಿಯ ಬೆಳೆಗೆ ಆದ್ಯತೆ ಕೊಟ್ಟು, ಹೇರಳವಾದ ವಿದೇಶಿ-ವಿನಿಮಯವನ್ನು ಪಡೆಯುತ್ತಿದ್ದಾರೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ- ೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ. ಹತ್ತಿ, ಅಥವಾ ಅರಳೆಯನ್ನು ಬಟ್ಟೆ ತಯಾರಿಸಲು ಕಚ್ಚಾವಸ್ತುವಾಗಿ ಉಪಯೋಗಿಸುವರು. ಹತ್ತಿ, ಬೀಜ-ತಂತು ಎಂದು ಪ್ರಸಿದ್ಧಿಪಡೆದಿದೆ. ಬೀಜವಿಲ್ಲದೆ ಹತ್ತಿ ಎಳೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಬೀಜದ ಮೈಮೇಲೆ, ಎಲ್ಲಾ ಸ್ತರಗಳಲ್ಲೂ ತೆಳುವಾದ,ನಯವಾದ, ಹಾಲಿನಷ್ಟು ಬಿಳುಪಾದ, ಶುಭ್ರವಾದ ಹತ್ತಿ ತಂತುಗಳು (ಫೈಬರ್ಗಳು) ಭದ್ರವಾಗಿ ಅಂಟಿಕೊಂಡಿರುತ್ತವೆ.

ಭಾರತದಲ್ಲಿ ಅಮೆರಿಕನ್ ಅಪ್ಲ್ಯಾಂಡ್ ಹತ್ತಿಯ ಪಾದಾರ್ಪಣೆಯನ್ನು ಕುರಿತು, ಕೆಲವು ವ್ಯಕ್ತಿಗಳಿಂದ ಆಗಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ೧೮೨೮ ರಲ್ಲೇ, (East India Trading Company) ನ ಕೆಲವು ಅಧಿಕಾರಿಗಳು ಹತ್ತಿಯಬೀಜಗಳ್ನ್ನು ಧಾರವಾಡದ ರೈತರಿಗೆ ತಲುಪಿಸಿ, ಅವರ ಹೊಲಗಳಲ್ಲಿ ಬಿತ್ತಿ-ಬೆಳೆಯಲು ಅನುವುಮಾಡಿಕೊಯ್ಯಿದ್ದರು. ಆ ಹತ್ತಿ ತಳಿಗಳು- ಬೊರ್ಬೊನ್ ಎಂಬ ಬಹುವಾರ್ಷಿಕಮರಹತ್ತಿ, ಇನ್ನೆರಡು, ನ್ಯೂ ಆರ್ಲಿಯನ್ಸ್, ಮತ್ತು ಜಾರ್ಜಿಯ. ಇವೇ ಮುಂದೆ Dharwad American- 1(ಧಾರವಾಡ್ ಮೆರಿಕನ್-೧ ) ಹತ್ತಿಗಳೆಂದು ಹೆಸರುವಾಸಿಯಾದವು. ಇದೇರೀತಿ, ೧೯೦೬ ರಲ್ಲಿ ಇಂಡೋಚೈನದಿಂದ ಹಡಗಿನಲ್ಲಿ ತಂದ ಹತ್ತಿಬೀಜಗಳನ್ನು ಮದ್ರಾಸಿನ ತರಿಭೂಮಿಯಲ್ಲಿ ಬಿತ್ತಿ ಸಾಗುವಳಿಮಾಡಲಾಯಿತು. ಇದನ್ನು" ಕ್ಯಾಂಬೋಡಿಯ ಹತ್ತಿ "[Cambodia,CO2]ಯೆಂದು ಕರೆದರು. ನಮ್ಮದೇಶಕ್ಕೆ ಚೆನ್ನಾಗಿ ಹೊಂದಿಕೊಂಡ ಈ ಹತ್ತಿತಳಿಯನ್ನು ಉಪಯೋಗಿಸಿಕೊಂಡು, ಮ. ಪ್ರದೇಶ, ಎಮ್. ಪಿ, ಗುಜರಾತ್ ನ ಕಾಥೆಯವಾಡ, ಪ. ಬಂಗಾಳ,ಮಹಾರಾಷ್ಟ್ರರಾಜ್ಯಗಳಲ್ಲಿ ಇದನ್ನು ವಿಸ್ತರಿಸಲಾಯಿತು. ಈಗ ಅದರ ಹೆಸರು ಮಹಾರಾಷ್ಟ್ರ ಅಮೆರಿಕನ್, ಗುಜರಾತ್ಅಮೆರಿಕನ್, ಮ.ಪ್ರದೇಶ್ ಅಮೆರಿಕನ್, ಎಮ್. ಪಿ .ಅಮೆರಿಕನ್ ಎಂದಾಯಿತು. ಭಾರತದ ಹತ್ತಿಸಂಶೋಧನಾ ಕಾರ್ಯಕ್ರಮದಲ್ಲಿ ಮುಂದೆ ಇವು ಅತಿ-ಹೆಚ್ಚಿನ ಪಾತ್ರವನ್ನು ಹೊಂದಿದವು.

[ಬದಲಾಯಿಸಿ] ಹತ್ತಿಬೆಳೆಯ ಗುಣಮಟ್ಟವನ್ನು ಹೆಚ್ಚಿಸಲು ಸಂಶೋಧನೆಗಳು

ಹತ್ತಿಯನ್ನು ನಮ್ಮದೇಶದಲ್ಲಿ ಬೆಳೆದರೂ ಸಹಿತ, ಅದರ ಬಗ್ಗೆ ಅತ್ಯಂತ ಆಳವಾದ ಮತ್ತು ಉಪಯುಕ್ತವಾದ ತಕನಿಕೆ ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಯೂರೋಪಿಯನ್ನರು ಮೊದಲು ಪ್ರಾರಂಭಿಸಿದರು. ಬ್ರಿಟಿಷರು, ಬೊಂಬಯಿನಲ್ಲಿ ೧೯೧೯ ರಲ್ಲೇ, " ಇಂಡಿಯನ್ ಸೆಂಟ್ರಲ್ ಕಾಟನ್ ಕಮಿಟಿ," ಎಂಬ ಸಂಘವನ್ನು ಹುಟ್ಟುಹಾಕಿದರು. ಇದು ಅವರ "ಇಂಪೀರಿಯಲ್ ಕಾಟನ್ ಕಮಿಟಿಯ’ ಒಂದು ಸಹ-ಸಂಸ್ಥೆ. " ಟೆಕ್ನೊಲಾಜಿಕಲ್ ಲ್ಯಾಬೊರೇಟರಿ" (Technological Laboratory/Technological Research Laboratory, CIRCOT) ಯ ಸ್ಥಾಪನೆ, ೧೯೨೪ ರ ಡಿಸೆಂಬರ್, ೩ ರಂದು, ಅಂದಿನ ವೈಸ್ ರಾಯ್/ ಗವರ್ನ್ರರ್ ಜನರಲ್, ಲಾರ್ಡ್ ಅಫ್ ರೀಡಿಂಗ, ರವರ ಹಸ್ತದಿಂದ ನೆರೆವೇರಿತು. ಭಾರತದೇಶದಾದ್ಯಂತ ಬೆಳೆಸಿದ ಹತ್ತಿಯ ಹೊಲದಲ್ಲಿನ ಫಸಲನ್ನು ಬೊಂಬಾಯಿನ ಹವಾ-ನಿಯಂತಿತ ವೇದಶಾಲೆಯಲ್ಲಿ ಮೂಲ್ಯಾಂಕನ ಮಾಡಿ, ಗುಣಮಟ್ಟವನ್ನು ನಿರ್ಧರಿಸಿ, ಉತ್ತಮವಾದ ತಳಿಗಳನ್ನು ಮತ್ತೆ ಮುಂದುವರಿಸುವ ಪರಿಕ್ರಮವನ್ನು ಶುರುಮಾಡಲಾಯಿತು. ಇದರ ಮೊಟ್ಟಮೊದಲ ನಿದೇಶಕರು ಟರ್ನರ್ ರವರು. ಅವರಜೊತೆಗೆ, ರಿಚರ್ಡಸನ್ ಸೇರಿ, ಹತ್ತಿ ಸಂಶೋಧನೆಯ ನಿರಂತರ ಕಾರ್ಯದ ಪಾದಾರ್ಪಣೆ ಮಾಡಿದ್ದು ಒಂದು ’ ಚಾರಿತ್ರ್ಯಿಕ ಘಟನೆ,”ಯೆಂದು ಹೇಳಬಹುದು. ವಿಶ್ವದ ಹತ್ತಿಸಂಶೋಧನೆಯ ಕಾರ್ಯವನ್ನು ಪ್ರಾರಂಭಗೊಳಿಸಿದವರಲ್ಲಿ ಅತ್ಯಂತ ಮೇರು ವ್ಯಕ್ತಿ,ಡಾ. ಬಾಲ್ಸ್ ರವರು. ನಂತರ ಹತ್ತಿಯ ಆಸಕ್ತಿ, ಅಮೆರಿಕದಲ್ಲಿ ಹೆಚ್ಚಿತು. ಇವೆರೆಡು ಖಂಡಗಳು ಸೇರಿ ಅತ್ಯಂತ ಮೌಲಿಕ ಸಂಶೋಧನೆಗಳನ್ನು ಇಂದಿನವರೆಗೂ ನಡೆಸಿಕೊಂಡುಬರುತ್ತಿದ್ದಾರೆ. ಮುಂದೆ, ಭಾರತೀಯ ವಿಜ್ಞಾನಿಗಳಾದ, ಡಾ. ನಾಜಿರ್ ಅಹ್ಮೆದ್, ಡಿ. ಎಲ್. ಸೆನ್, ಡಾ. ಸಿ. ಎನ್. ನಂಜುಂಡಯ್ಯ, ಹರಿರಾವ್ ನವಕಲ್, ಡಾ. ಆರ್. ಎಲ್. ಎನ್. ಐಯ್ಯಂಗಾರ್, ಡಾ. ಸಿ.ಟಿ.ಪಟೇಲ್, ಡಾ. ಸಂತಾನಂ, ಶ್ರೀ. ಮಾರಪ್ಪನ್, ಡಾ. ಕಾತರ್ಕಿ, ಡಾ. ಮುನ್ಷಿಸಿಂಗ್, ಶ್ರೀ.ಕೃಷ್ಣಮೂರ್ತಿ ಮುಂತಾದ ಹಲವಾರು ಸಂಶೋಧಕರ ಸಹಯೋಗದಿಂದ, ಭಾರತದ ಹತ್ತಿ ಬೆಳೆ ಒಂದು ಮಹತ್ತರ ಹಂತವನ್ನು ಗಳಿಸಿದೆ.

[ಬದಲಾಯಿಸಿ] ICCC (Indian Central Cotton Committee, Bombay), ನಂತರ ICAR (ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ)

ICCC, ಭಾರತೀಯ ಹತ್ತಿಯ ಗುಣಸಂವರ್ಧೆನೆಗಾಗಿಯೇ ಪ್ರಪ್ರಥಮವಾಗಿ ಕೆಲಸಮಾಡಿದ ತಾಯಿ-ಸಂಸ್ಥೆ ಇದು. ಇದರ ಲ್ಯಾಬೋರೇಟರಿ, ಬೊಂಬಯಿನಲ್ಲಿ, ಹತ್ತಿ ವಸ್ತ್ರೋದ್ಯಮದ ಕೇಂದ್ರದಲ್ಲಿ ಇದ್ದು, ಸುಸ್ಥಿರವಾಗಿ ಸ್ಥಾಪಿಸಲ್ಪಟ್ಟು ಸುಮಾರು ೪೩ ವರ್ಷಗಳ ಕಾರ್ಯಾವಧಿಯಲ್ಲಿ ಮಾಡಿದ ಕೆಲಸ ಅಮೋಘ. ಭಾರತದ ಹತ್ತಿಬೆಳೆಯುವ ರಾಜ್ಯಗಳ ಕೃಷಿ ಕೇಂದ್ರಗಳಲ್ಲಿ, ಮತ್ತು ಕೃಷಿ ಹೊಲಗಳಲ್ಲಿ ವೈಜ್ಞಾನಿಕ ಪದ್ಧತಿಗಳಿಂದ ಬೆಳೆಸಿದ ಸುಧಾರಿತ ಹತ್ತಿ ತಳಿಗಳನ್ನು ಬೊಂಬಾಯಿನ Technological Labortory, The Central Institue for Research on Cotton Technology, CIRCOT, (ಟೆಕ್ನೊಲಾಜಿಕಲ್ ಲ್ಯಾಬೊರೇಟರಿ) ಯಲ್ಲಿ ಹವಾನಿಯಂತ್ರಿತ ಪರಿಸರದಲ್ಲಿ ಅತ್ಯಂತ ನವೀನ ಯಂತ್ರಗಳಸಹಾಯದಿಂದ ಮೂಲ್ಯಾಂಕನ ಮಾಡಿ ಅದರ "ಸೂತ್ರಂಕ,"ವನ್ನು ಕಂಡುಹಿಡಿದು, ಪ್ರತಿವರ್ಷವೂ ಇದೇ ಪದ್ಧತಿಯಲ್ಲಿ ವಿಶ್ಲೇಶಣೆಮಾಡಿ ಗುಣಮಟ್ಟವನ್ನು ನಿರ್ಧರಿಸಿ, ಪ್ರಕಟಿಸಲಾಗುತ್ತಿತ್ತು. ಇದರಿಂದ ಕೃಷಿವಿಜ್ಞಾನಿಗಳಿಗೆ ಸಹಾಯವಾಗುತ್ತಿದೆ.

ಬ್ರಿಟಿಷರು ಮೊದಲು ಇದರ ರೂಪರೇಖೆಗಳನ್ನು ಭದ್ರವಾಗಿ ಸ್ಥಾಪಿಸಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ಸಾಧಿಸಬೇಕಾದ ಗುರಿಯ ಸ್ಪಷ್ಟಕಲ್ಪನೆ ಇದೆ. ಅಮೆರಿಕ ಸರ್ಕಾರ, ತಮ್ಮ PL -೪೮೦ ಯೋಜನೆಯ ಪ್ರಕಾರ, ಅನುದಾನದ ಸಹಾಯವನ್ನು ಮಾಡಿ ಸಂಶೋಧನೆಗೆ ಸಹಕಾರನೀಡಿದರು. ಹೀಗೆನಡೆದ ಹತ್ತಿಸಂಶೋಧನೆ ಕಾರ್ಯದ ಅವಧಿಯಲ್ಲಿ, ಸುಮಾರು ೬೦ ಕ್ಕೂ ಹೆಚ್ಚು ಸುಧಾರಿತ ತಳಿಗಳನ್ನು ಗುರುತಿಸಿತ್ತು. ೧೯೬೬ ರಲ್ಲಿ " Indian Cotton Committee," ಕಾರ್ಯಾವಧಿ ಮುಗಿದು, ಇದರ ಕಾರ್ಯಾಡಳಿತವನ್ನು ICAR ವಹಿಸಿಕೊಂಡಿತು. ಈ ಬದಲಾವಣೆಯಿಂದ ಹತ್ತಿ ಸಂಶೋಧನಾ ಕೇಂದ್ರಗಳಿಗೆ ಹೆಚ್ಚಿನ ಆರ್ಥಿಕಸಹಾಯ, ಯಂತ್ರಗಳ ಹಂಚಿಕೆ, (Testing Instruments and Processing Machines) ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹೆಚ್ಚಿನ ಒತ್ತುಕೊಟ್ಟಿದ್ದರಿಂದ ಅನುಸಂಧಾನ ಕಾರ್ಯಗಳಲ್ಲಿ ವಿಳಂಬವಾಗದೆ ಅನುಕೂಲವಾಯಿತು. ವಿಜ್ಞಾನದ ಹಲವು ಶಾಖೆಗಳಲ್ಲಿ ಕೆಲಸಮಾಡುವ ತಜ್ಞರುಗಳು ಈ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.


[ಬದಲಾಯಿಸಿ] ಪ್ರಧಾನಿ, ಶ್ರೀಮತಿ. ಇಂದಿರ ಗಾಂಧಿ ಮತ್ತು ಅವರ ಹಸಿರುಕ್ರಾಂತಿ, [Green Revolution ] ಕಾರ್ಯಕ್ರಮ

ಇದು ಅತ್ಯಂತ ಪ್ರಭಾವಿ ಮತ್ತು ಫಲಪ್ರದವಾದ ಕಾರ್ಯಾಚರಣೆಯಾಗಿತ್ತು. ಬೆಳೆಯುತ್ತಿರುವ ಅಗಾಧ ಜನಸಂಖ್ಯೆಯ ಮೂಲಭೂತಸಮಸ್ಯೆಗಳಾದ, ಅನ್ನ, ಬಟ್ಟೆ, ವಸತಿಗಳಿಗೆ ಪೂರಕವಾದ, ಬೃಹತ್ ಕಾರ್ಯಕ್ರಮವಾಗಿತ್ತು. ಇಂದಿಗೂ ಆಸಮಸ್ಯೆಗಳು ಪರಿಹಾರವಾಗಿಲ್ಲ. ಇಲ್ಲಿ ನಮ್ಮ ಮಾನವ ಸಂಪನ್ಮೂಲಗಳು, ಪ್ರಕೃತಿದತ್ತ ಸಂಪನ್ಮೂಲಗಳು, ಮತ್ತು ವೈಜ್ಞಾನಿಕ ತಂತ್ರಜ್ಞಾನಗಳ ಪೂರ್ಣಲಾಭಗಳನ್ನು ಪಡೆದು, ಮೇಲೆ ತಿಳಿಸಿದ ಬೃಹತ್ ಸಮಸ್ಯ್ಗಗಳನ್ನು ಎದುರಿಸಲೇಬೇಕಾದ ಮಹತ್ಕಾರ್ಯವಾಗಿತ್ತು. ಇಂದಿಗೂ ಇದೆ. ಆಹಾರಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ, ಸೆಣಬು, ರೇಷ್ಮೆಯಂತಹ ಫೈಬರ್ಗಳು, ಮತ್ತಿತರ ಕೃಷಿ ಪದಾರ್ಥಗಳ ಉತ್ಪಾದನೆಯನ್ನು ಹೆಚ್ಚಿಸಲು, ಡಾ. ನಾರ್ಮನ್ ಬೋರ್ಲಾಗರ, ವೈಜ್ಞಾನಿಕ ಸಲಹೆ, ಸಹಕಾರಗಳ ಜೊತೆಯಲ್ಲಿ ಮುಂದುವರೆಯಲಾಯಿತು. ಪ್ರಧಾನಿ,ಶ್ರೀಮತಿ ಇಂದಿರಾಜಿಯವರು, ತಮ್ಮ ಪೂರ್ಣಸಹಕಾರದ ನೇತೃತ್ವವನ್ನು ಕೊಟ್ಟು, ಅಂದಿನ ICAR ನ ಮಹಾನಿದೇಶಕರಾಗಿದ್ದ, Dr. M. S. Swaminathan ರವರಿಗೆ, ಆ ದಿಶೆಯಲ್ಲಿ ಮುಂದುವರೆಯಲು, ಪೂರ್ಣಸ್ವಾತಂತ್ರ್ಯವನ್ನು ಕೊಟ್ಟರು. ಇದರಿಂದ, ದೇಶದ ಬೆನ್ನೆಲುಬಾದ, ರೈತರಿಂದ ಶುರುವಾಗಿ, ಬೇರೆಲ್ಲ ಕೃಷಿಸಂಸ್ಥೆಗಳ ಶಾಖೆಗಳು ಅನವರತ ದುಡಿದಿದ್ದರ ಫಲವಾಗಿ, ನಮ್ಮದೇಶದ ಆಹಾರ, ಬಟ್ಟೆ ಸಮಸ್ಯೆಗಳು ಉತ್ತಮಗೊಂಡು, ಕೆಲವು ಪದಾರ್ಥಗಳನ್ನು ರಫ್ತುಮಾಡುವ ಪರಿಸ್ಥಿತಿ ಬಂದಿದೆ. ಆದರೆ, ಎಣ್ಣೆಕಾಳುಗಳ ಬಗ್ಗೆ, ಹಾಗೂ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಇನ್ನೂ ಸಾಲದು. ಇಂತಹ ಸ್ವಯಂಪರಿಪೂರ್ಣತೆಯ ಅಭಿಯಾನ, ನಡೆದದ್ದು ಪ್ರಥಮಬಾರಿ. ವಾಸ್ತವವಾಗಿ ಹಸಿರುಕ್ರಾಂತಿ ಕಾರ್ಯಕ್ರಮ, ೧೯೬೦ ರಿಂದಲೆ ಶುರುವಾಗಿತ್ತು. ಆದರೆ ಸಮಯ ಸಮಯದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ವಿಸ್ತರಿಸಿಕೊಂಡು ನಡೆಸುವುದು ಬಹಳ ಅನಿವಾರ್ಯ.


[ಬದಲಾಯಿಸಿ] ICCC, ಪ್ರಾರಂಭವಾದ ಪ್ರಥಮ ೫೦ ವರ್ಷಗಳ, ಹತ್ತಿ ಸಂಶೋಧನೆಯಿಂದ ದೊರೆತ ಸುಧಾರಿತ ಹತ್ತಿ ನಮೂನೆಗಳು

(Medium and Super Medium Staple (24-28 mm. length)


೧. ಸರಣಿ- ೧.


ಅ) ಉತ್ತರ ವಲಯ : 320F, H14, Bikaneri Narma, F414, H777.

ಆ) ಮಧ್ಯ ವಲಯ  : 170-CO2, Khandwa-2

ಇ) ದಕ್ಷಿಣ ವಲಯ  : MCU-1, MCU-2, MCU-7, LRA 5166.


೨. ಸರಣಿ- ೨.


(High quality Long and Extra Long Staple Cottons :


ಅ) ನಮೂನೆಗಳು  : MCU-4, MCU-5, Suvin-(32-40 ಮಿ.ಮಿ.)

ಆ) ಹೈಬ್ರಿಡ್ ಗಳು  : H4 H6, Savtha, Varalaxmi, DCH-32, (32-40 ಮಿ.ಮಿ)

ಇ)  : JKHY-1, NHH-44


೩. ಸರಣಿ- ೩.

ಖಾಸಗಿವಲಯದ ಸಂಶೋಧಿತ ತಳಿಗಳು :


ಅ) Ankur-651, RCH-144, RCH-134, RCH-317, (Medium Staple)

ಆ) Bunny, RCH-2RCH-20 (long and Extra Long Staple)


೪. ಸರಣಿ- ೪.


Bt Varieties :


RCH-2- (ಆಂಧ್ರ ಪ್ರದೇಶ್ ಮತ್ತು ಗುಜರಾತ್)

RCH-134,RCH-317 (ಪಂಜಾಬ್)


೫. ಸರಣಿ- ೫.


(HxB) Varieties :


ಅ) RCHB625 Bt- 37.7 49.3 33.2 g/tex 3.0

ಅ) DCH-32- Bt- 36.1 50.1 27.9 g/tex 3.3

ಇ) Suvin- Bt- 37.8-g/tex


Bt (cottons)ಹತ್ತಿ ತಳಿಗಳು ಈಗ ಭಾರತದ ರೈತಾಪಿಜನರ ನಂಬಿಕೆಯನ್ನು ಗಳಿಸಿಕೊಂಡಿವೆ.

[ಬದಲಾಯಿಸಿ] ಬಯೋಟೆಕ್ನಾಲಜಿಯ ಪರಿಣಾಮಗಳು

ಬಯೋಟೆಕ್ನಾಲಜಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಹತ್ತಿ ಬೆಳೆಯನ್ನು ಅಭಿವೃದ್ಧಿಪಡಿಸಿರುವ (ಗುಣಮಟ್ಟದಲ್ಲಿ ಹಾಗೂ ಉತ್ಪಾದನೆಯಲ್ಲಿ)ಮಾಹಿತಿಗಳು ಎಲ್ಲರಿಗೂ ಸಮಾಧಾನವನ್ನು ಕೊಟ್ಟಿವೆ. ಬಯೊಟೆಕ್ ಹತ್ತಿತಳಿಗಳ ಸಂಶೋಧನೆ ಮತ್ತು ಪರಿಕ್ಷಣಾಕಾರ್ಯಗಳು ಈಗಾಗಲೆ ದಶಕದಿಂದ ನಡೆಯುತ್ತಿವೆ. ಭಾರತ ಸರ್ಕಾರ ೨೦೦೨ ರಲ್ಲಿ ರೈತರಿಗೆ ಉಪಯೋಗಿಸಲು ೩ ಹತ್ತಿತಳಿನಮೂನೆಗಳನ್ನು ಬಿಡುಗಡೆಮಾಡಿತ್ತು. ೨೦೦೬-೭ ರಲ್ಲಿ ೨೦ ಬೀಟಿ ಹತ್ತಿ ತಳಿಗಳನ್ನು ಬೆಳೆಸಲು ಶಿಫಾರಸುಮಾಡಿದೆ. ಕೇವಲ ೧ ಕಂಪೆನಿಯ ಬೀಜಗಳು ಆಗ ಉಪಯೋಗಿಸಲು ಸಿಗುತ್ತಿದ್ದವು. ಆದರೆ ಈಗ ಸುಮಾರು ೪ ಬೀಜಕಂಪೆನಿಗಳು ಮುಂದೆಬಂದು ಉತ್ತಮ ಬೀಜಗಳನ್ನು ಸರಬರಾಜುಮಾಡುತ್ತಿವೆ.

೨೦೦೨ ರಲ್ಲಿ ರೈತರು ಸುಮಾರು ೪೪,೫೦೦ ಹೆ. ಭೂಮಿಯಲ್ಲಿ ಬೀಟಿ ಹತ್ತಿ ಬೀಜಗಳನ್ನು ಬಿತ್ತಿದ್ದರು. ಅದು ಕ್ರಮವಾಗಿ, ೧ ಲಕ್ಷ,(೨೦೦೩-೪) ೫ ಲಕ್ಷ (೨೦೦೪-೫)ಎಕರೆಗಳಿಗೆ ಹೆಚ್ಚಿದ್ದು, ಈಗ (೨೦೦೫-೬)ರ ಸಾಲಿನಲ್ಲಿ ೧೪ ಲಕ್ಷ ಹೆ.ಎಕರೆಗಳಲ್ಲಿ ರೈತರು, ಬೀಟಿ ಹತ್ತಿಬೆಳೆಯನ್ನು ಸಫಲಪೂರ್ವಕವಾಗಿ ಬೆಳೆಯುತ್ತಿದ್ದಾರೆ. ದಕ್ಷಿಣ ಹಾಗೂ ಮಧ್ಯಭಾರತದ ರೈತಸಮುದಾಯ ಬೀಟಿಹತ್ತಿಯ ಲಾಭಗಳನ್ನು ಮನಗಂಡಿದ್ದಾರೆ. ಉತ್ತರ ಭಾರತದ ರೈತರೂ ಈಗಾಗಲೇ ಅದರ ಬಗ್ಗೆ ಹೆಚ್ಚಿನ ಆಸಕ್ತಿತೋರಿಸಲು ಪ್ರಾರಂಭಿಸಿದ್ದಾರೆ.


ವಿಶ್ವದ ಹತ್ತಿಬೆಳೆಗೆ ಮೀಸಲಾಗಿಟ್ಟಿರುವ ಭೂಮಿ- ೩೨.೦ ಮಿ. ಹೆಕ್ಟೇರ್ಸ್. ಭಾರತದ ಹತ್ತಿಬೆಳೆಯುವ ಒಟ್ಟು ಭೂಮಿ- ೮.೯ ಮಿ. ಹೆಕ್ಟೇರ್ಸ್. ವಿಶ್ವದ ಸ್ತರದಲ್ಲಿ ಬಯೋಟೆಕ್ ಹತ್ತಿ ಬೆಳೆಸುವ ಪ್ರಮಾಣ-‍ ೨೮%, ಭಾರತದ ಬಯೋಟೆಕ್ ಹತ್ತಿ ಬೆಳೆಯ ಪ್ರಮಾಣ-೧೫.೬%

ಮೇಲೆ ತಿಳಿಸಿದ ಅಂಕಿ-ಅಂಶಗಳಿಂದ ಬೀಟಿ ಹತ್ತಿಯ ಪ್ರಮಾಣ, ಕ್ರಮೇಣ ಹೆಚ್ಚುತ್ತಿರುವುದು ಕಂಡುಬರುತ್ತಿದೆ, ಮತ್ತು ರೈತರು ಅದರ ಲಾಭವನ್ನು ಪಡೆದಿದ್ದಾರೆ. ಅದರಿಂದ ಅವರೇ ಈಗ ಈ ಹೊಸತಂತ್ರಜ್ಞಾನವನ್ನು ಸ್ವಾಗತಿಸುತ್ತಿದ್ದಾರೆ.

Monsanto, ಎಂಬ ಅಮೆರಿಕನ್ ಬೀಜಸಂಸ್ಥೆಯ ಜೊತೆಗೂಡಿ, ಜಾಲ್ನಾದ (ಮಹಾರಾಷ್ಟ್ರ),ಪದ್ಮಭೂಷಣ ಡಾ. ಬರ್ವಾಲೆಯವರು Bt ಹತ್ತಿ, ಹಾಗೂ ಬಯೋಟೆಕ್ ಬೆಳೆಗಳನ್ನು ಮಹಾರಾಷ್ಟ್ರದ ರೈತರಲ್ಲಿ ಜನಪ್ರಿಯಗೊಳಿಸಿದರು. ಸುಮಾರು ೧ ದಶಕದ ಕಾಲ, ಹೊಲಗಳಲ್ಲಿ ಮಾಡಿದ ಸಫಲ ಹಾಗೂ ಫಲಪ್ರದ ಪ್ರಯೋಗಗಳಿಂದಾಗಿ, ಭಾರತಸರ್ಕಾರ, ಅವರ ಕಂಪೆನಿಯ (MAHYCO)ಬೀಜಗಳನ್ನು, ೨೦೦೩ ರಲ್ಲಿ ರೈತರಿಗೆ ಬಿಡುಗಡೆಮಾಡಿತು. ಇಂದು ಆ ಬೀಜಗಳನ್ನು ಭಾರತದ ಎಲ್ಲಾಪ್ರದೇಶಗಳ ರೈತಬಾಂಧವರೂ ಸ್ವಾಗತಿಸಿದ್ದಾರೆ.


[ಬದಲಾಯಿಸಿ] ಭಾರತಸರ್ಕಾರ ಆದೇಶಿಸಿ ನಡೆಸಿದ, T. M. C ಕಾರ್ಯಕ್ರಮಗಳು

ನಮ್ಮದೇಶದ ಹತ್ತಿ ಬೇಲ್ಗಳು ಮೊದಲಿನಿಂದಲೂ ಕಲಬೆರೆಕೆವಸ್ತುಗಳಿಂದ (Contaminations) ಕಲುಷಿತವಾಗಿದ್ದು, ಅಂತರರಾಷ್ಟ್ರೀಯ ಹತ್ತಿ ಬಾಝಾರಿನಲ್ಲಿ , (WTO) ಒಳ್ಳೆಯ ಬೆಲೆ ಗಿಟ್ಟಿಸುವಲ್ಲಿ ಅಸಮರ್ಥವಾಗಿರುವ ವಿಷಯವನ್ನು ಹತ್ತಿ ವ್ಯಾಪಾರದ ಎಲ್ಲವರ್ಗದವರೂ ಬಲ್ಲರು. ಇದಕ್ಕೆ ಕಾರಣಗಳು ಹಲವಾರು. ಹಳೆಕಾಲದ ಹತ್ತಿ ವ್ಯಾಪಾರಿಗಳು ಮೊದಲು, ಇದಕ್ಕೆ ಹೆಚ್ಚುಗಮನ ಕೊಟ್ಟಿರಲಿಲ್ಲ. ೨೦೦೫ ರಲ್ಲಿ, ವಿಶ್ವಮುಕ್ತಮಾರುಕಟ್ಟೆ ತೆರೆದಾಗ, ಎಲ್ಲರಿಗೂ ನಮ್ಮ ಹತ್ತಿಯ ಗುಣಮಟ್ಟವನ್ನು ವೃದ್ಧಿಸದೆ ವಿಧಿಯಿಲ್ಲವೆಂಬ ಕಟು-ಸತ್ಯದ ಅರಿವಾಗತೊಡಗಿತು. ಜಿನ್ನಿಂಗ್ ಮಿಲ್ ಗಳ ನವೀಕರಣ, ಹತ್ತಿ ಸಾಗಾಣಿಕೆಯ ಎಲ್ಲಾ ಹಂತಗಳಲ್ಲೂ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ಹವಾನಿಯಂತ್ರಿತ ಗೋಡೋನ್ಗಳ ಅಗತ್ಯತೆ, ಹತ್ತಿಶೇಖರಣೆಯ ವ್ಯವಸ್ಥೆಗಳನ್ನು ಮಾಡಲು, ಅಪಾರ ಹಣದ ಅಗತ್ಯತೆಗಳು, ಹತ್ತಿಉದ್ಯಮದ ಮುಂದಿದ್ದ ಮಹತ್ತರ ಸವಾಲುಗಳು. ಭಾರತಸರ್ಕಾರದ ಟೆಕ್ಸ್ಟೈಲ್ ಮಿನಿಸ್ಟ್ರಿ ಇದನ್ನು ಕೂಡಲೇ ಮನಗಂಡು, ಟೀ. ಎಮ್. ಸಿ ಯನ್ನು ಸ್ಥಾಪಿಸಿ, ಜಿನ್ನರಿಗಳಿಗೆ ಕಡಿಮೆದರದ ಬಡ್ಡಿವ್ಯವಸ್ಥೆಯನ್ನು ಮಾಡಿ,ಹತ್ತಿವರ್ತಕರಿಗೆ ಸಹಾಯಮಾಡಿತು. ಈ ನ್ಯೂನತೆಯನ್ನು ಹೋಗಲಾಡಿಸಲು ಭಾರತಸರ್ಕಾರದವರು ತೆಗೆದುಕೊಂಡು ನಡೆಸಿದ ಕಾರ್ಯಕ್ರಮವೇ, TMC Mission- ೧, ೨, ೩, ೪, ಘಟ್ಟಗಳು. CCI ನೇತೃತ್ವದಲ್ಲಿ ನಡೆದ ಈ ಅಭಿಯಾನ, ೨೦೦೦ ದ ಫೆಬ್ರವರಿತಿಂಗಳಿನಲ್ಲಿ ಜಾರಿಗೆ ಬಂತು. ಇದರಲ್ಲಿ ಪಾಲ್ಗೊಂಡ ಸಂಸ್ಥೆಗಳು, EICA, Co-Operative Marketing Federations, ರಾಜ್ಯಗಳ ಎಲ್ಲಾ Mktg. Federations ಗಳು. ತಾಂತ್ರಿಕ ಹಾಗೂ ವೈಜ್ಞಾನಿಕ ನೆರವನ್ನು ICAR ನ, CIRCOT ಸಂಸ್ಥೆ, ನುಂಬೈ, ಸಮಯ-ಸಮಯಕ್ಕೆ ಸರಿಯಾಗಿ ಕೊಟ್ಟು ಮೆಲ್ವಿಚಾರಣೆ ಮಾಡಿದ ಫಲಸ್ವರೂಪದಿಂದ, ಇಂದು ನಮ್ಮ ಹತ್ತಿ ಬೇಲ್ಗಳ ಮಾರಾಟದಲ್ಲಿ ಗಮನಾರ್ಹ ಪ್ರಗತಿಯನ್ನು ನಾವು ಕಾಣಬಹುದಾಗಿದೆ. TMC ಯ ಇನ್ನೊಂದು ಪ್ರಮುಖ ಕೊಡುಗೆಯೆಂದರೆ, ಹತ್ತಿಯ ಹಲವು ಬಗೆ ಉಪಯೋಗಗಳ ಹಲವು ತಂತ್ರಜ್ಞಾನಗಳನ್ನು ಚಾಲನೆಗೆ ತಂದು ಪ್ರಸಿದ್ಧಿಪಡಿಸಿದ ಕಾರ್ಯಗಳು. ಅಡುಗೆಗೆ ಬೇಕಾದ ಎಣ್ಣೆ, ಬಯೋಗ್ಯಾಸ್, ಊಟದ ಬಳಕೆಯ ಅಣಬೆಗಳ ತಯಾರಿಕೆ, ಹಲವು ವಿಧದ ಪೇಪರ್ / ಪಾರ್ಟಿಕಲ್ ಬೋರ್ಡ್ಗಳ ತಯಾರಿಕೆ, ಪಶು ಆಹಾರ, ಮತ್ತು ಗೊಬ್ಬರದ ತಯಾರಿಕೆಗಳು ಇಂದು ವಿಕಸಿತಗೊಂಡು ಒಂದು ಸಣ್ಣ/ದೊಡ್ಡ ಔದ್ಯೋಗಿಕ ಮಟ್ಟದಲ್ಲಿ ಕೆಲಸಮಾಡುತ್ತಿವೆ.

[ಬದಲಾಯಿಸಿ] ವಿಶ್ವಮಾರುಕಟ್ಟೆಗಳಲ್ಲಿ ಭಾರತದ ಹತ್ತಿ ಮಾರಾಟ

ಹತ್ತಿ ಮಾರಾಟದ ವ್ಯವಸ್ಥೆ, ಬಹಳ [Volatile] & [Unpredictable] ಆಗಿರುವುದರಿಂದಲೂ, ಅದರ ಬೆಲೆ ನಿಯಂತ್ರಣ ಮಾಡುವುದು ಅಷ್ಟು ಸುಲಭವಲ್ಲ. ಇದು ಹತ್ತಿ-ವ್ಯಾಪಾರದ ಸಂಕೀರ್ಣತೆಯನ್ನು ತಿಳಿಸುತ್ತದೆ. ೧೯೬೦ ಕ್ಕೆ ಮೊದಲು, ನೂರಾರು ವರ್ಷಗಳಿಂದಲೂ, ನಮ್ಮ ದೇಶದ ಹತ್ತಿ-ಉತ್ಪಾದನೆಯನ್ನು ರಫ್ತು ಮಾಡುವ, ಮತ್ತು ವಿದೇಶಿ ಹತ್ತಿಯನ್ನು ಆಮದುಮಾಡಿಕೊಳ್ಳುವ ಕೆಲಸಗಳನ್ನು ಬೊಂಬಾಯಿನ ಖಾಸಗಿವ್ಯಾಪಾರಿಗಳು , ಸಮರ್ಪಕವಾಗಿ ಮಾಡುತ್ತಾ ಬಂದಿದ್ದಾರೆ.ಅವರು ನಮ್ಮ ದೇಶದ ಒಟ್ಟುಹತ್ತಿಯ ೭೦% ವ್ಯಾಪಾರವನ್ನು, ನಿರ್ವಹಿಸುತ್ತಿದ್ದಾರೆ. ಇವರೆಲ್ಲಾ Ginnery Owners, Ginning & Pressing Merchants], ಸ್ವಂತವ್ಯಾಪಾರಿಗಳು, ಅಥವ ಲೈಸೆನ್ಸ್ ಪಡೆದ ಕಂಪೆನಿಗಳು.

೧೮೬೦ ರಲ್ಲಿ ಮಾಡಿದ ರಫ್ತು ವ್ಯಾಪಾರದ ವಿವರಗಳು ಹೀಗಿವೆ. ೪.೨೨ ಲಕ್ಷಬೇಲ್ಗಳು. ಅದೇ ೧೮೬೬ ರಲ್ಲಿ ೧೬.೧೯ ಲಕ್ಷಬೇಲ್ಗಳು. ೧೯೨೧ ರಲ್ಲಿ EICA,ಎಂಬ ಖಾಸಗಿ ಸಂಸ್ಥೆ , ಮತ್ತು ಅದರಜೊತೆಗೆ ICCC, Technological ಲ್ಯಾಬೊರೇಟೊರಿ ತೆಲೆಯೆತ್ತಿದವು. EICA ಸದಸ್ಯರುಗಳು, ಎಲ್ಲವರ್ಗಗಳಿಂದ ಬಂದವರು. ಉದಾ : ಮಿಲ್ ಮಾಲೀಕರುಗಳು, ಜಿನ್ನಿಂಗ್ ಫ್ಯಾಕ್ಟರಿ ಓನರ್ಸ್ಗಳು, ಹತ್ತಿ ಕಮೀಶನ್ ಏಜೆಂಟ್ಸ್ ಗಳು, ದೊಡ್ಡ- ಚಿಕ್ಕ ಹತ್ತಿ ವ್ಯಾಪಾರಿಗಳು, ಇತ್ಯಾದಿ. EICA ಆಮದು /ರಫ್ತುಗಳನ್ನು Forward Trading in Cotton, on All India basis, ಮತ್ತು Spot Trading, ನಲ್ಲಿ ಮುಂದಾಳತ್ವ ತೆಗೆದುಕೊಂಡು ನಡೆಸುತ್ತಿದೆ. ೧೯೭೦ ರಲ್ಲಿ Coton Corporation of India, ( CCI), [A Public Sector Undertaking, Ministry of Textiles, Govt. of India] ಅಸ್ತಿತ್ವಕ್ಕೆ ಬಂತು. ೧೯೮೦ ರವರೆಗೆ ಈ ಸಂಸ್ಥೆ, ಹತ್ತಿ ಆಮದನ್ನು ಮಾಡಿಕೊಳ್ಳಲು ಅಪೇಕ್ಷಿಸುವ ಕಂಪೆನಿಗಳಿಗೆ ಸಹಾಯಮಾಡುತ್ತಿತ್ತು. ಅದೇ ವೇಳೆಗೆ, MSCCGMP ಶುರುವಾಯಿತು. ಇದು ಮಹಾರಾಷ್ಟ್ರದ ಹತ್ತಿಬೆಳೆಯನ್ನು ಖರೀದಿಸಿ, ಮಾರುವ ಏಕೈಕಸಂಸ್ಥೆಯಾಗಿತ್ತು. ೧೯೮೦-೧೯೯೦ ರವರೆಗೆ ಈ ಎರಡೂ ಸಂಸ್ಥೆಗಳು ಪ್ರಮುಖಪಾತ್ರವಹಿಸಿದ್ದವು.


"ಹಸಿರು ಕ್ರಾಂತಿ,"ಯನಂತರ ಭಾರತದೇಶದ ಹತ್ತಿಬೆಳೆಯ ಹೆಚ್ಚುವರಿಯಿಂದಾಗಿ, ಜಿನ್ನಿಂಗ್ ಕ್ಷೇತ್ರದಲ್ಲಿ ಹಲವು ಮಾರ್ಪಾಟುಗಳನ್ನು ಮಾಡಬೇಕಾಗಿ ಬಂತು. ಆ ಸಮಯದಲ್ಲಿ ಬೊಂಬಾಯಿನ ಹೊರಗೂ, ಕೆಲವು ಖಾಸಗಿ ಕಂಪನಿಗಳು ತಲೆ ಎತ್ತಿದವು. ೨೦೦೧ ರಲ್ಲಿ [Ginning & Pressing Units]ಗಳು, ತಾವೇ ನೇರವಾಗಿ ಹತ್ತಿಬೇಲ್ಗಳನ್ನು [Mills] ಗಳಿಗೆ ಸರಬರಾಜು ಮಾಡಲು ಪ್ರಾರಂಭಿಸಿದವು. ಇದರಿಂದ ಅವರಿಗೆ ಕಮೀಶನ್ ಉಳಿತಾಯವಾಯಿತು. ೧೯೯೦ ರ ಮಧ್ಯಭಾಗದಲ್ಲಿ (Decentralisation), ವಿಕೆಂದ್ರೀಕರಣ, ಶುರುವಾಗಿ, ಅದು ಮುಂದುವರೆಯುತ್ತಿದೆ. ಮುಂದೆ ಇದರ ಪಾತ್ರ ಎಲ್ಲಾ ಕ್ಷೇತ್ರಗಳಲ್ಲೂ ಆಗುವ ಸಂಭವಗಳು ಹೆಚ್ಚಾಗಿದೆ.

International ಹತ್ತಿ ಮಾರುಕಟ್ಟೆಯ ಹತ್ತಿ ಮಾರಾಟವನ್ನು, ಸಾವಿರಾರು ಕಂಪೆನಿಗಳು ನಿರ್ವಹಿಸುತ್ತಿವೆ. ಅವುಗಳಲ್ಲಿ ೫೦೦ ಭಾರಿಕಂಪೆನಿಗಳು. ಇವುಗಳಪೈಕಿ, ೨೪ ನ್ನು ಅತಿದೊಡ್ಡ ಮಾರಾಟದ ವಹಿವಾಟುಮಾಡುವ ಸಂಸ್ಥೆಗಳೆಂದು ಗುರುತಿಸಬಹುದು.ಇವು ವಿಶ್ವದ ೨/೫ (International Cotton Trade) ಸಂಭಾಳಿಸುತ್ತಿವೆ. ICAC ಸರ್ವೆಯ ಪ್ರಕಾರ, ೧೭ ಅತಿ ದೊಡ್ಡ, NGOs ಗಳ ಸಹಕಾರದಿಂದ , ವಿಶ್ವದ ೨೬% ಹತ್ತಿ ವ್ಯಾಪಾರವನ್ನು , American Cotton Shippers' Association (ACSA), ಕಂಪೆನಿ, ಮಾಡುತ್ತಿದೆ, ಎಂದು ಅಂದಾಜುಮಾಡಲಾಗಿದೆ.

ಹತ್ತಿ ಬ್ರೀಡಿಂಗ್ ಕಾರ್ಯಕ್ರಮದಲ್ಲಿ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲೊಜಿ) ವನ್ನು ಉಪಯೋಗಿಸಿ ನಾವು, ನಮಗೆ ಬೇಕಾದ ಗುಣಗಳನ್ನು ಆರಿಸಿಕೊಂಡು ಅದನ್ನು ನೇರವಾಗಿ ಪಡೆಯುತ್ತಿದ್ದೇವೆ. ಇದು ಬಯೋಟೆಕ್ನೊಲೊಜಿಯ ಮಹತ್ತರ ಕೊಡುಗೆ. ಈ ತಂತ್ರಜ್ಞಾನ ಉತ್ಪಾದನಾಸಾಮರ್ಥ್ಯವನ್ನು ಹೆಚ್ಚಿಸಿದೆ. ಜಿನ್ನಿಂಗ್ ನಂತರ ಮತ್ತು ಅದಕ್ಕೆ ಪೂರ್ವಭಾವಿಯಾಗಿ ಕೆಲವು ಎಚ್ಚರಿಕೆಯಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಮುಂದೆ ಬೇಲ್ ಮಾಡಬೇಕಾದ ಲಿಂಟ್ ಹತ್ತಿಯ ಗುಣಮಟ್ಟವನ್ನು ನಾವು ಸಮರ್ಥನೆ ಮಾಡಿಕೊಳ್ಳಬಹುದು. ಏಕೆಂದರೆ, ಜಿನ್ನಿಂಗ್ ಆವರಣದಲ್ಲಿ ಸಣ್ಣ- ಸಣ್ಣ ಮರಳಿನ ಕಣಗಳು, ಚಿಂದಿಬಟ್ಟೆಯ ಚೂರುಗಳೂ, ಸೆಣಬಿನ ದಾರದತುಂಡುಗಳೂ, ನೀಲಿಶ್ಯಾಯಿಯಿಂದ ಆವೃತವಾದ ಹತ್ತಿ- ತಂತುಗಳು, ಇರುವುದನ್ನು ಐ. ಟಿ. ಎಮ್. ಎಫ್, ತನ್ನ ಪ್ರತಿ ೨ ವರ್ಷಕ್ಕೊಮ್ಮೆ ಸರ್ವೆಮಾಡಿ ಪ್ರಕಟಿಸುವ ವರದಿಯಲ್ಲಿ ದಾಖಲುಮಾಡುತ್ತಾಬಂದಿದೆ. ಇಂತಹ ತಡೆಯಬಹುದಾದ ಕಲಬೆರಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಲಿಂಟ್ ಹತ್ತಿಯ ಕಾರ್ಯಸ್ತರಗಳನ್ನು ಸರಿಯಾಗಿ ನಿಯಂತ್ರಿಸಿ, ಮೆಲ್ವಿಚಾರಣೆಮಾಡಿ ಹತ್ತಿ-ಬಟ್ಟೆಕಾರ್ಖಾನೆಗಳಿಗೆ ಕಳಿಸುವುದರಿಂದ, ನಮ್ಮ ಹತ್ತಿಗೆ ಸ್ವಾಭಾವಿಕವಾಗಿಯೇ ಒಳ್ಳೆಯ ಕ್ರಯ ಸಿಕ್ಕುತ್ತದೆ.


[ಬದಲಾಯಿಸಿ] Technology Mission on Cotton (TMC)

ಮೇಲಿನ ಅಪೇಕ್ಷಿತ ಸೌಲಭ್ಯಗಳನ್ನೂ, TMC Mission, I, II, III, IV ಗಳು, ಬಹುತೇಕವಾಗಿ ಸಾಧಿಸಿವೆ. ಫೆಬ್ರವರಿ, ೨೦೦೦ ರಲ್ಲಿ, ಪ್ರಾರಂಭವಾದಾಗಿನಿಂದ ಈ ಕಾರ್ಯಕ್ರಮ, ಬಹಳ ತ್ವರಿತಗತಿಯಿಂದ ಮುಂದೋಡಿದೆ. ೨೦೦೫ ರಿಂದ ವಿಶ್ವ -ಮುಕ್ತಮಾರುಕಟ್ಟೆ, ಕಾರ್ಯರೂಪಕ್ಕೆ ಬಂದದ್ದರಿಂದ, ನಮ್ಮ ದೇಶದ ಹತ್ತಿಗಳೂ ಸ್ಪರ್ಧಾತ್ಮಕ ವಾಗಿಲ್ಲದಿದ್ದರೆ, ಉಳಿಗಾಲವಿಲ್ಲವೆನ್ನುವ ಸತ್ಯಾಂಶವನ್ನು ಹತ್ತಿ-ಕಾರ್ಖಾನೆಗಳ ಮುಂದಾಳುಗಳು ಮನಗಂಡರು.


TMC Mission, ಅಭಿಯಾನದಲ್ಲಿ ನೇರವಾಗಿ ಪಾಲ್ಗೊಂಡ ಸಂಸ್ಥೆಗಳು ಹೀಗಿವೆ.


೧. Indian Cotton Mills Federation, ೨. Cotton Adivisory Board, Ministry of Textiles, ೩. EICA, ೪. Farmers' Co-Operatives, ೫. AICCI Project, ೬. CIRCOT, ೭. ISCI, ೮. CICR, Nagpur, ಎಲ್ಲಸೇರಿ, ಬಳಕೆದಾರರ ಬೇಡಿಕೆಗಳಿಗೆ ಸ್ಪಂದಿಸಿ, ಎಲ್ಲ ಸೌಕರ್ಯಗಳನ್ನೂ ಮಾಡಲಾಗಿದೆ.

TMC Mission ಮಿಶನ್ ಜೊತೆಗೆ, ಸಹ -ಉತ್ಪನ್ನಗಳಾದ ಅಡುಗೆ ತೈಲ, ಜಾನುವಾರುಗಳ ಮೇವು, ಬಯೊಗ್ಯಾಸ್, ಕಾಗದ, ಕಾಗದದ ಬೊರ್ಡ್ಗಳು, ಅಣಬೆಗಳ ತಯಾರಿಕೆ ಇತ್ಯಾದಿಗಳನ್ನು ಉತ್ಪಾದಿಸಲಾಗುತ್ತಿದೆ. ಹೀಗೆ, TMC Mission ಹಲವಾರು ಎಚ್ಚರಿಕೆ ಕಾರ್ಯಕ್ರಮಗಳಿಂದಾಗಿ ನಮ್ಮ ದೇಶದ ಹತ್ತಿ ಬೆಳೆಯ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಿರುವುದನ್ನು ಕಾಣಬಹುದು. ೧೦ ನೆಯ ಪಂಚವಾರ್ಷಿಕಯೋಜನೆಯ ಲೆಖ್ಖಾಚಾರದಂತೆ, ೨೨೦ ಲಕ್ಷಬೇಲ್ಗಳು, ಮತ್ತು ೩೨೦ ಕೆ.ಜಿ. ಲಿಂಟ್ ಹತ್ತಿ /ಪ್ರತಿ ಹೆಕ್ಟೇರ್ನಲ್ಲಿ. ಆದರೆ, ೨೦೦೫-೨೦೦೬ ರ ಹತ್ತಿ-ವಾರ್ಷಿಕಬೆಳೆ, ಎಲ್ಲ ಅಂದಾಜುಗಳನ್ನೂ ಮೀರಿಸಿದೆ. ೨೪೦ ಲಕ್ಷಬೇಲ್ಗಳು, ಮತ್ತು ೪೬೦ ಕೆ.ಜಿ. ಲಿಂಟ್ ಹತ್ತಿ/ ಪ್ರತಿಹೆಕ್ಟೇರ್ ಭೂಮಿಯಲ್ಲಿ.

[ಬದಲಾಯಿಸಿ] ಆಧಾರಗಳು

  1. A Seminar on 'How to improve Quality of Indian Textiles to meet International Standards.'IFS/CIRCOT, Feb,20, 1999.
  2. Seed Industry and Cotton Production-Shri. B. R. Barwale, Chairman, MAHYCO, Silver Jubilee Lecture series, ISCI Publication. July, 28, 2001.
  3. Present status of the Indian Cottons and strategies for improvement, Lecture by Shri.M.B.Lal, Adviser/ former CMD/ TMC Mission, CCI, Mumbai- Nov, 23, 2001. ISCI, Journal, Mumbai.
  4. Indian Cotton Trade-Past Present and Future,Silver Jubilee Lecture Series, ISCI Publication, April, 26, 2002.
  5. 'My Spin Lab', A book by, Shri. Holalkere Rangarao Laxmivenkatesh. Published in 2005.
  6. Referral Laboratory on Cotton Textiles at CIRCOT. An Insight into the Additional facilities. CIRCOT Publication.(Under NATP Sponsered Programme)
  7. Cotton Production, Technology Mission, and new plans for paradigm shift, ISCI Joural, 2006.
  8. Quality profile of the cottons- 2006, Director, CIRCOT.
  9. " Breeding for Fibre Quality Improvement of Cotton."-R. Krishnamourthy, Res Dir; Rasi seeds
  10. (P)Ltd ; Salem,T.N. Dr. V. sundaram Lecture Series, ISCI Publication, June, 16, 2007.


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -