ಹಾರುವ ತಟ್ಟೆಗಳು
From Wikipedia
ಆದಿ,ಅಂತ್ಯಗಳಾವುದೂ ಇಲ್ಲದ ಈ ಬ್ರಹ್ಮಾಂಡವೆಂಬುದು ಕಲ್ಪನಾತೀತವಾದುದು. ಈ ಅಖಂಡ ವಿಶ್ವದ ಯಾವುದೋ ಒಂದು ಕಡೆಯಲ್ಲಿ ಅಡಕವಾಗಿದೆ ಕ್ಷೀರ ಪಥ(Milky way)ವೆಂದು ಕರೆಯಲ್ಪಡುವ ನಮ್ಮ ಆಕಾಶ ಗಂಗೆ (Galaxy). ಈ ಆಕಾಶಗಂಗೆಯೇ ನಾವು ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ನಮ್ಮ ಸೌರ ಮಂಡಲದ ಸದಸ್ಯರಾದ ಸೂರ್ಯ,ಭೂಮಿ ಮತ್ತಿತರ ಗ್ರಹಗಳಿವೆ. ಹೀಗೆ ಅನಂತಾನಂತವಾಗಿ ಹರಡಿರುವ ಈ ವಿಶ್ವದಲ್ಲಿ ಏನೇನಿವೆ ಏನೇನಿಲ್ಲ ಎಂಬುದು ಅಷ್ಟು ಸುಲಭವಾಗಿ ನಿರ್ಧರಿಸಲಾಗದ ವಿಷಯ. ವಿಶ್ವದ ಹೊಸ ಹೊಸ ವಿಷಯಗಳನ್ನರಿಯಲು ಮಾನವನು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾನೆ. ಈ ರೀತಿಯ ಸಂಶೋಧನೆಗಳಲ್ಲಿ ಹಲವಾರು ನೂತನವಾದ ಹಾಗೂ ವಿಸ್ಮಯಕಾರಿಯಾದ ಸಂಗತಿಗಳನ್ನು ಆತ ಕಂಡುಕೊಂಡಿದ್ದಾನೆ ಹಾಗೂ ಮಂಡಿಸಿದ್ದಾನೆ. ಎಲ್ಲ ಪ್ರತಿಪಾದನೆಗಳಿಗೂ ಸಾರ್ವತ್ರಿಕ ಒಪ್ಪಿಗೆ ಸಿಗದೇ ಇರಬಹುದು ಆದರೆ ಹೊಸ ಹೊಸ ಪ್ರತಿಪಾದನೆಗಳು ಬಂದಾಗಲೆಲ್ಲ ಅವು ಜನರಲ್ಲಿ ಹೊಸ ಕುತೂಹಲ ಹಾಗೂ ಸಂಚಲನವನ್ನಂತೂ ಸೃಷ್ಟಿಸಿವೆ. ಅಂತಹ ಒಂದು ಪ್ರಯತ್ನವೇ ಹಾರುವ ತಟ್ಟೆಗಳು ಅಥವಾ Flying saucers.
[ಬದಲಾಯಿಸಿ] ಕಿರು ಪರಿಚಯ
ಖಗೋಳ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಹಾರುವ ತಟ್ಟೆಗಳು Unidentified Flying Objects (UFO) ಅಥವಾ ಅಪರಿಚಿತ ಹಾರಾಡುವ ವಸ್ತುಗಳು ಎಂಬ ಗುಂಪಿಗೆ ಸೇರತ್ತವೆ. ಅಂತರಿಕ್ಷದಲ್ಲಿ ಇದುವರೆಗೂ ಗುರುತಿಸಲ್ಪಡದೇ ಇರುವಂಥಹ ವಿಸ್ಮಯಕಾರಿ ವಸ್ತುಗಳೆಲ್ಲವೂ ಇದೇ ಗುಂಪಿಗೆ ಸೇರುತ್ತವೆ. ಹಾಗಾಗಿ ಅಂತರಿಕ್ಷದಲ್ಲಿ ಹಾರಾಡಿದಂತೆ ಕಾಣುವ ವಿಸ್ಮಯಕಾರಿ ಅಪರಿಚಿತ ಆಕಾಶ ಕಾಯಗಳೇ ಹಾರುವ ತಟ್ಟೆಗಳು ಎಂಬುದಾಗಿ ವ್ಯಾಖ್ಯಾನಿಸಬಹುದು. ಭೂಮಿಯನ್ನು ಬಿಟ್ಟು ಜೀವಿಗಳನ್ನು ಹೊಂದಿರುವ ಗೃಹಗಳು ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಇದ್ದು ಅಲ್ಲಿಂದಲೇ ಈ ಹಾರಾಡುವ ವಸ್ತುಗಳು ಬರುತ್ತವೆ ಎಂದೂ ಸಹ ಹಲವರು ನಂಬುತ್ತಾರೆ.
[ಬದಲಾಯಿಸಿ] ಹಾರುವ ತಟ್ಟೆಗಳ ಕಿರು ಇತಿಹಾಸ
ಈ ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಲೇ ಬಂದಿವೆ. 1947 ರಲ್ಲಿ ಅಮೇರಿಕದ ವಾಶಿಂಗ್ಟನ್ ನಗರದ ಕೆನತ್ ಆರ್ನಾಲ್ಡ್ ಎಂಬ ವ್ಯಕ್ತಿಯೋರ್ವನು ಖಾಸಗಿ ವಿಮಾನವೊಂದರಲ್ಲಿ ಪಯಣಿಸುತ್ತಿದ್ದಾಗ ವಿಚಿತ್ರವಾದ,ತಟ್ಟೆಯಂತಹ ಆಕೃತಿಯುಳ್ಳ ಸುಮಾರು ೯ ವಸ್ತುಗಳು ಪರ್ವತಗಳ ಮೇಲಿನಿಂದ ಹಾದು ಹೋದವು, ಹಾಗೂ ಅವು ಅತ್ಯಂತ ವೇಗವಾಗಿ ಅಂದರೆ ಗಂಟೆಗೆ ಸುಮಾರು ೨೫೦೦ ಕಿ.ಮೀ, ಗೂ ಹೆಚ್ಹಿನ ವೇಗದಲ್ಲಿ ಚಲಿಸುತ್ತಿದ್ದವು ಎಂಬುಗಾಗಿ ವರದಿ ಮಾಡಿದನು. (ಲೇಖನ ಅಪೂರ್ಣ).