Web Analytics

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಭೂಮಿ - Wikipedia

ಭೂಮಿ

From Wikipedia


ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ಭೂಮಿ Astronomical symbol of Earth
ಅಪೋಲೊ ೧೭ರಿಂದ ಕಂಡಂತೆ ಭೂಮಿಯ ಚಿತ್ರ.
ನೀಲಿ ಗೋಲಿಯಂತೆ ಕಾಣುವ ಭೂಮಿ; ಅಪೋಲೊ ೧೭ ತೆಗೆದ ಚಿತ್ರ.
ಕಕ್ಷೆಯ ಗುಣಗಳು
ಅಪರವಿ ೧೫೨,೦೯೭,೭೦೧ ಕಿ.ಮೀ.
(೧.೦೧೬ ೭೧೦ ೩೩೩ ೫ AU)
ಪುರರವಿ ೧೪೭,೦೯೮,೦೭೪ ಕಿ.ಮೀ.
(೦.೯೮೩ ೨೮೯ ೮೯೧ ೨ AU)
ದೀರ್ಘಾರ್ಧ ಅಕ್ಷ ೧೪೯,೫೯೭,೮೮೭.೫ ಕಿ.ಮೀ.
(೧.೦೦೦ ೦೦೦ ೧೧೨ ೪ AU)
ಹ್ರಸ್ವಾರ್ಧ ಅಕ್ಷ ೧೪೯,೫೭೬,೯೯೯.೮೨೬ ಕಿ.ಮೀ.
(೦.೯೯೯ ೮೬೦ ೪೮೬ ೯ AU)
ಕಕ್ಷೆಯ ಪರಿಧಿ ೯೨೪,೩೭೫,೭೦೦ ಕಿ.ಮೀ.
( ೬.೧೭೯ ೦೬೯ ೯೦೦ ೭ AU)
ಕಕ್ಷೀಯ ಕೇಂದ್ರ ಚ್ಯುತಿ ೦.೦೧೬ ೭೧೦ ೨೧೯
ನಾಕ್ಷತ್ರಿಕ ವರ್ಷ ೩೬೫.೨೫೬ ೩೬೬ ದಿನ
(೧.೦೦೦ ೦೧೭ ೫ a)
ಯುತಿ ಅವಧಿ n/a
ಗರಿಷ್ಠ ಕಕ್ಷಾ ವೇಗ ೩೦.೨೮೭ ಕಿ.ಮೀ./ಪ್ರತಿ ಕ್ಷಣ
(೧೦೯,೦೩೩ ಕಿ.ಮೀ./ಘಂ.)
ಸರಾಸರಿ ಕಕ್ಷಾ ವೇಗ ೨೯.೭೮೩ ಕಿ.ಮೀ./ಪ್ರತಿ ಕ್ಷಣ
(೧೦೭,೨೧೮ ಕಿ.ಮೀ./ಘಂ.)
ಕನಿಷ್ಠ ಕಕ್ಷಾ ವೇಗ ೨೯.೨೯೧ ಕಿ.ಮೀ./ಪ್ರತಿ ಕ್ಷಣ
(೧೦೫,೪೪೮ ಕಿ.ಮೀ./ಘಂ.)
ಓರೆ
(ಸೂರ್ಯನ ಸಮಭಾಜಕ ರೇಖೆಗೆ ೭.೨೫°)
ಆರೋಹಣ ಸಂಪಾತದ ರೇಖಾಂಶ ೩೪೮.೭೩೯ ೩೬°
Argument of the perihelion ೧೧೪.೨೦೭ ೮೩°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ ೧ (ಚಂದ್ರ)
(3753 Cruithne ಲೇಖನವನ್ನೂ ನೋಡಿ)
ಭೌತಿಕ ಗುಣಲಕ್ಷಣಗಳು
Aspect Ratio ೦.೯೯೬ ೬೪೭ ೧
ದೀರ್ಘವೃತ್ತೀಯತೆ ೦.೦೦೩ ೩೫೨ ೯
ಸಮಭಾಜಕ ರೇಖೆಯ ವ್ಯಾಸ ೧೨,೭೫೬.೨೭೪ ಕಿ.ಮೀ.
ಧ್ರುವಗಳ ಮೂಲಕ ವ್ಯಾಸ ೧೨,೭೧೩.೫೦೪ ಕಿ.ಮೀ.
ಸರಾಸರಿ ತ್ರಿಜ್ಯ ೬,೩೭೨.೭೯೭ ಕಿ.ಮೀ.
ಸಮಭಾಜಕದ ಪರಿಧಿ ೪೦,೦೭೫.೦೨ ಕಿ.ಮೀ.
Meridional circumference ೪೦,೦೦೭.೮೬ ಕಿ.ಮೀ.
ಸರಾಸರಿ ಪರಿಧಿ ೪೦,೦೪೧.೪೭ ಕಿ.ಮೀ.
ಮೇಲ್ಮೈ ವಿಸ್ತೀರ್ಣ ೫೧೦,೦೬೫,೬೦೦ ಕಿ.ಮೀ.²
ನೆಲದ ವಿಸ್ತೀರ್ಣ ೧೪೮,೯೩೯,೧೦೦ ಕಿ.ಮೀ.² (೨೯.೨ %)
ನೀರಿನ ವಿಸ್ತೀರ್ಣ ೩೬೧,೧೨೬,೪೦೦ ಕಿ.ಮೀ.² (೭೦.೮ %)
ಗಾತ್ರ ೧.೦೮೩ ೨೦೭ ೩×10೧೨ ಕಿ.ಮೀ.³
ದ್ರವ್ಯರಾಶಿ ೫.೯೭೪೨×10೨೪ kg
ಸರಾಸರಿ ಸಾಂದ್ರತೆ ೫,೫೧೫.೩ kg/m³
ಸಮಭಾಜಕದ ಬಳಿ ಗುರುತ್ವ ೯.೭೮೦ ೧ m/s²
(೦.೯೯೭ ೩೨ g)
ಮುಕ್ತಿ ವೇಗ ೧೧.೧೮೬ ಕಿ.ಮೀ./ಪ್ರತಿ ಕ್ಷಣ

೩೯,೬೦೦ ಕಿ.ಮೀ./ಘಂ.≅

ನಾಕ್ಷತ್ರಿಕ ದಿನ ೦.೯೯೭ ೨೫೮ ದಿನ (೨೩.೯೩೪ ಘಂಟೆ)
ಅಕ್ಷೀಯ ಪರಿಭ್ರಮಣ ವೇಗ ೪೬೫.೧೧ ಮೀ./ಪ್ರತಿ ಕ್ಷಣ (ಸಮಭಾಜಕದಲ್ಲಿ)
ಅಕ್ಷದ ಓರೆ ೨೩.೪೩೯ ೨೮೧°
ಉತ್ತರ ಧ್ರುವದ ವಿಷುವದಂಶ ೦° (೦ ಘಂಟೆ ೦ ನಿಮಿಷ ೦ ಕ್ಷಣ)
ಘಂಟಾವೃತ್ತಾಂಶ +೯೦°
ಪ್ರತಿಫಲನಾಂಶ ೦.೩೬೭
ಮೇಲ್ಮೈ ತಾಪಮಾನ
ಕನಿಷ್ಠ ಸರಾಸರಿ ಗರಿಷ್ಠ
೧೮೫ ಕೆ ೨೮೭ ಕೆ ೩೩೧ ಕೆ
-೮೮.೩ °ಸೆ. ೧೪ °ಸೆ. ೫೭.೭ °ಸೆ.
ವಾತಾವರಣದ ಒತ್ತಡ ೧೦೧.೩ kPa (MSL)
Adjective Terrestrial, Terran, Telluric, Tellurian, Earthly, Earthling (lifeforms)
Atmospheric constituents
ಸಾರಜನಕ ೭೮.೦೮ %
ಆಮ್ಲಜನಕ ೨೦.೯೪ %
ಆರ್ಗಾನ್ ೦.೯೩ %
ಇಂಗಾಲದ ಡೈಆಕ್ಸೈಡ್ ೦.೦೩೮ %
ನೀರಾವಿ ಅತ್ಯಲ್ಪ ಪ್ರಮಾಣ (ಪ್ರಮಾಣವು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ.)

ಭೂಮಿ - ಇದು ಸೂರ್ಯಗ್ರಹಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹವಾಗಿದ್ದು, ಸೂರ್ಯನಿಂದ ೩ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ಅತಿ ದೊಡ್ಡ ಗ್ರಹವಾದ ಭೂಮಿಯು ಸೌರಮಂಡಲದಲ್ಲೇ ಅತಿ ದೊಡ್ಡ ಘನಾಕೃತಿಯಾಗಿದೆ. ಇದಲ್ಲದೆ, ಮಾನವರಿಗೆ ಈಗ ತಿಳಿದಿರುವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಜಂತುಗಳನ್ನು ಹೊಂದಿರುವ ಏಕೈಕ ಸ್ಥಳವೆಂದರೆ ಭೂಮಿ. ಇದು ಸೌರಮಂಡಲದಲ್ಲಿ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ಗ್ರಹವೂ ಆಗಿದೆ. ಸಾಮಾನ್ಯವಾಗಿ ವೈಜ್ಞಾನಿಕ ಒಪ್ಪಿಗೆಯಲ್ಲಿರುವ ಪುರಾವೆಗಳ ಪ್ರಕಾರ, ಭೂಮಿಯು ೪೫೭ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರವು ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.

ಪರಿವಿಡಿ

[ಬದಲಾಯಿಸಿ] ಪರಿಚಯ

ಭೂಮಿಯ ಚಿಪ್ಪನ್ನು ಹಲವು ಭೂಫಲಕಗಳನ್ನಾಗಿ ವಿಂಗಡಿಸಲಾಗಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಮೇಲ್ಮೈ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಕವಚವು ದಪ್ಪನಾದ ಒಂದು ಘನರೂಪಿ ಸಂವಾಹಕದಿಂದ ಕೂಡಿದ್ದರೆ, ಭೂಗರ್ಭವು ಕಬ್ಬಿಣದಿಂದ ನಿರ್ಮಿತವಾಗಿದ್ದು, ಭೂಮಿಯ ಕಾಂತಕ್ಷೇತ್ರವನ್ನು ಉತ್ಪಾದಿಸುತ್ತದೆ. ಜೀವ ಜಂತುಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಜಂತುಗಳು ಉಂಟುಮಾಡುವ ಪರಿಸರ ಸಮತೋಲನವು ಭೂಮಿಯ ಮೇಲ್ಮೈಯನ್ನು ಬದಲಾಯಿಸುತ್ತದೆ. ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದ್ದು, ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಸೇರಿದೆ.

ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ಒಡನಾಟಗಳು ಆಗುತ್ತವೆ. ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂಮಿಯ ಇತಿಹಾಸದ ಮೊದಲ ಭಾಗದಲ್ಲಿ ಒಂದು ಧೂಮಕೇತುವಿನ ಅಪ್ಪಳಿಕೆಯಿಂದ ಸಾಗರಗಳು ಉದ್ಭವವಾದವು ಎಂದೆನ್ನಲಾಗಿದೆ. ನಂತರದ ಕ್ಷುದ್ರಗ್ರಹ ಅಪ್ಪಳಿಕೆಗಳು ಮೇಲ್ಮೈನ ಮೇಲೆ ಗಮನಾರ್ಹ ಬದಲಾವಣೆಗಳನ್ನು ಉಂಟುಮಾಡಿದ್ದಿರಬಹುದು. ಭೂಮಿಯ ಕಕ್ಷೆಯಲ್ಲಿನ ಬದಲಾವಣೆಗಳ ದೀರ್ಘಾವಧಿ ಅವರ್ತವೇ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ ಕಾರಣವಾಗಿದ್ದಿರಬಹುದು.

[ಬದಲಾಯಿಸಿ] ಇತಿಹಾಸ

ಟೆಂಪ್ಲೇಟು:Main ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ಪೂರ್ವಾಪರದ ವಿವರಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ೪೫೬.೭ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು ಸೌರ ಜ್ಯೋತಿಪಟಲದಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು. ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರನ ಉದ್ಭವವಾಯಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಒಂದು ಕಾಯದಿಂದ ಆಗಿದ್ದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಮುಂಚಿನ ವಾಯುಮಂಡಲದವು ಸೃಷ್ಟಿಯಾಯಿತು; ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨] ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆಗಳಿಂದ, ಒಂದು ಸ್ವ-ಪ್ರತಿಕೃತಿಕರಿಸಿಕೊಳ್ಳುವ ಸಂಯುಕ್ತ ವಸ್ತು ಹೊರಬಂದಿತೆಂದು ನಂಬಲಾಗಿದೆ. ಇದಾದ ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಅವತರಿಸಿತು.[೩]

ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ ಆಮ್ಲಜನಕವು ವಾಯುಮಂಡಲದದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು. The incorporation of smaller cells within larger ones resulted in the development of complex cells called eukaryotes.[೪] Cells within colonies became increasingly specialized, resulting in true multicellular organisms. ಅಪಾಯಕಾರಿ ಅತಿನೇರಳೆ ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಶುರುಮಾಡಿದ ಮೇಲಂತೂ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ಪಸರಿಸಿದವು.

ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈಯ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತಾ, ಮತ್ತೆ ಮುರಿದುಕೊಳ್ಳುತ್ತಾ ಬಂದಿವೆ. ಮೇಲ್ಮೈಯ ಮೇಲೆ ನಿರಂತರವಾಗಿ ಚಲಿಸುವ ಈ ಭೂಫಲಕಗಳು ಒಮ್ಮೊಮ್ಮೆ ಒಗ್ಗೂಡಿ, ಬೃಹತ್ ಖಂಡಗಳೂ ಉಂಟಾಗಿವೆ. ಸುಮಾರು ೭೫ ಕೋಟಿ ವರ್ಷಗಳ ಹಿಂದೆ, ಈಗ ತಿಳಿದಂತೆ ಅತ್ಯಂತ ಹಳೆಯದಾದ ರೋಡಿನಿಯ ಬೃಹತ್ ಖಂಡವು ಮುರಿಯಲು ಶುರುವಾಯಿತು. ನಂತರ, ಸುಮಾರು ೬೦-೫೪ ಕೋಟಿವರ್ಷಗಳ ಹಿಂದೆ ಈ ತುಣುಕುಗಳು ಮತ್ತೆ ಒಗ್ಗೂಡಿ ಪ್ಯಾನೋಟಿಯ ಖಂಡವನ್ನು ನಿರ್ಮಿಸಿದವು. ಕೊನೆಯದಾಗಿ ನಿರ್ಮಾಣಗೊಂಡ ಪ್ಯಾಂಜೇಯ ಖಂಡವು ಸುಮಾರು ೧೮ ಕೋಟಿ ವರ್ಷಗಳ ಹಿಂದೆ ಮುರಿದು ಬೇರ್ಪಟ್ಟಿತು.[೫]

ಸುಮಾರು ೭೫-೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ ಹಿಮನದಿಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಮಂಜಿನ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ರಿಂದೀಚೆಗೆ ಶಂಕಿಸಲಾಗಿದೆ. ಈ ವಾದವನ್ನು "ಹಿಮದ ಉಂಡೆ ಭೂಮಿ" ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ ಕೇಂಬ್ರಿಯನ್ ಸ್ಫೋಟದ ಸ್ವಲ್ಪವೇ ಮುನ್ನ ಈ ಹಿಮಯುಗವು ಆದದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ.[೬]

ಸುಮಾರು ೫೩.೫ ಕೋಟಿ ವರ್ಷಗಳ ಹಿಂದೆ ನಡೆದ ಕೇಂಬ್ರಿಯನ್ ಸ್ಫೋಟದ ನಂತರ ಇದುವರೆಗೆ ಐದು ದೊಡ್ಡ ಅವನತಿಗಳು ನಡೆದಿವೆ.[೭] ಸುಮಾರು ೬.೫ ಕೋಟಿ ವರ್ಷಗಳ ಹಿಂದೆ ಆದ ಕೊನೆಯ ಅವನತಿಯು ಬಹುಶಃ ಒಂದು ಉಲ್ಕೆಯು ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು. ಈ ಅವನತಿಯಿಂದ (ಪಕ್ಷಿಗಳಲ್ಲದ) ಡೈನೊಸಾರ್ಗಳು ಮತ್ತಿತರ ದೊಡ್ಡ ಸರೀಸೃಪಗಳು ನಾಶವಾದರೂ, ಸಸ್ತನಿಗಳಂಥ ಚಿಕ್ಕ ಪುಟ್ಟ ಜೀವಿಗಳು ಉಳಿದುಕೊಂಡವು. ಕಳೆದ ೬.೫ ಕೋಟಿ ವರ್ಷಗಳಲ್ಲಿ ಸಸ್ತನಿಗಳು ಬಹಳಷ್ಟು ವೈವಿಧ್ಯಮಯವಾಗಿ ಬೆಳೆದಿವೆ. ಕೆಲವು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿನ ಒಂದು ಸಣ್ಣ ವಾನರವು ಎರಡು ಕಾಲುಗಳ ಮೇಲೆ ಎದ್ದು ನಿಂತುಕೊಳ್ಳಲು ಕಲಿತುಕೊಂಡಿತು. ಇದರಿಂದ ಉಪಕರಣಗಳ ಬಳಕೆಗೆ ಸಹಾಯವಾಯಿತು. ಇದಲ್ಲದೆ, ಸಂಪರ್ಕವು ಹೆಚ್ಚಾಗಿ, ದೊಡ್ಡ ಮೆದುಳಿನ ವಿಕಸಕ್ಕೆ ಬೇಕಾದ ಪ್ರಚೋದನೆ ಮತ್ತು ಪೌಷ್ಟಿಕಾಂಶಗಳನ್ನೂ ಒದಗಿಸಿತು. ಬೇಸಾಯ ಮತ್ತು ನಂತರದ ನಾಗರಿಕತೆಗಳ ಕಾರಣದಿಂದ, ಇಂದು ಮಾನವ ಸಮುದಾಯವು ಸ್ವಲ್ಪವೇ ಕಾಲದಲ್ಲಿ ಭೂಮಿಯ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.

[ಬದಲಾಯಿಸಿ] ರಚನೆ ಮತ್ತು ವಿನ್ಯಾಸ

[ಬದಲಾಯಿಸಿ] ಆಕಾರ

ಭೂಮಿಯ ಅಕಾರವು ಹ್ರಸ್ವಾಕ್ಷ ಗೋಳಕಲ್ಪಕ್ಕೆ ಬಹಳ ಹತ್ತಿರದಲ್ಲಿದೆ. ಆದರೆ, ಭೂಮಿಯ ನಿಖರ ಆಕಾರ (ಭೂಕಲ್ಪ) ಮತ್ತು ಈ ನಿರ್ದೇಶಕ ಗೋಳಕಲ್ಪಗಳ ನಡುವೆ ಸುಮಾರು ೧೦೦  ಮೀ.ಗಳವರೆಗೂ ವ್ಯತ್ಯಾಸವಿದೆ. ನಿರ್ದೇಶಕ ಗೋಳಕಲ್ಪದ ಸರಾಸರಿ ವ್ಯಾಸವು ಸುಮಾರು ೧೨,೭೪೨ ಕಿ.ಮೀ. ಗಳಷ್ಟಿವೆ. ಭೂಮಿಯ ಅಕ್ಷೀಯ ಪರಿಭ್ರಮಣೆಯ ಕಾರಣದಿಂದ ಸಮಭಾಜಕವು ಸ್ವಲ್ಪ ಉಬ್ಬುತ್ತದೆ. ಹೀಗಾಗಿ, ಧ್ರುವಗಳ ಮೂಲಕ ವ್ಯಾಸವು ಸಮಭಾಜಕದ ಮೂಲಕ ವ್ಯಾಸಕ್ಕಿಂತ ಸುಮಾರು ೪೩ ಕಿ.ಮೀ.ಯಷ್ಟು ಕಡಿಮೆಯಿರುತ್ತದೆ. ಭೂಮಿಯ ಮೇಲ್ಮೈನಲ್ಲಿ ಅತ್ಯಧಿಕ ಸ್ಥಳೀಯ ವಿಚಲತೆಗಳೆಂದರೆ ಮೌಂಟ್ ಎವರೆಸ್ಟ್ (ಸ್ಥಳೀಯ ಸಾಗರ ಮಟ್ಟಕ್ಕಿಂತ ೮,೮೫೦ ಮೀ. ಮೇಲೆ) ಮತ್ತು ಮರಿಯಾನ ಕಂದಕ (ಸ್ಥಳೀಯ ಸಾಗರ ಮಟ್ಟಕ್ಕಿಂತ ೧೦,೯೨೪ ಮೀ. ಕೆಳಗೆ). ಆದ್ದರಿಂದ, ಒಂದು ಪರಿಪೂರ್ಣ ದೀರ್ಘವೃತ್ತಜಕ್ಕೆ ಹೊಳಿಸಿದರೆ, ಭೂಮಿಯು ಸುಮಾರು ೦.೧೭% ಸಹಿಷ್ಣುತೆಯನ್ನು ಹೊಂದಿದೆ. ಹೋಲಿಕೆಯಲ್ಲಿ, ಬಿಲಿಯರ್ಡ್ ಚೆಂಡುಗಳು ೦.೨೨%ಗಿಂತ ಕಡಿಮೆ ಸಹಿಷ್ಣುತೆಯನ್ನು ಹೊಂದಿರುತ್ತವೆ. ಸಮಭಾಜಕದಲ್ಲಿ ಇರುವ ಉಬ್ಬಿನ ಕಾರಣದಿಂದಾಗಿ, ಭೂಮಿಯ ಕೇಂದ್ರದಿಂದ ಅತಿ ಹೆಚ್ಚು ದೂರದಲ್ಲಿರುವ ವೈಶಿಷ್ಟ್ಯವು ಈಕ್ವೆಡಾರ್ನಲ್ಲಿರುವ ಚಿಂಬೊರಾಜೋ ಪರ್ವತವಾಗಿದೆ.

[ಬದಲಾಯಿಸಿ] ರಸಾಯನಿಕ ರಚನೆ

ಭೂಮಿಯ ದ್ರವ್ಯರಾಶಿಯು ಸುಮಾರು ೫.೯೮ ×10೨೪ ಕಿ.ಗ್ರಾಮ್.ಗಳಷ್ಟಿದೆ. ಬಹುತೇಕವಾಗಿ ಇದು ಕಬ್ಬಿಣ (೩೫.೦%), ಆಮ್ಲಜನಕ (೨೮.೦%), ಸಿಲಿಕಾನ್ (೧೭.೦%), ಮೆಗ್ನೀಷಿಯಂ (೧೫.೭%), ನಿಕಲ್ (೧.೫%), ಕ್ಯಾಲ್ಷಿಯಂ (೧.೪%) ಮತ್ತು ಅಲ್ಯುಮಿನಂ (೧.೪%) ಮೂಲವಸ್ತುಗಳಿಂದ ಕೂಡಿದೆ[೮].

ಭೂಮಿಯ ಚಿಪ್ಪಿನ ಸಾಮಾನ್ಯ ಶಿಲಾ ಭಾಗಗಳೆಲ್ಲ ಬಹುತೇಕ ಆಕ್ಸೈಡುಗಳೆ; ಇದಕ್ಕೆ ಮುಖ್ಯ ಅಪವಾದವಾಗಿರುವ ಕ್ಲೋರಿನ್, ಗಂಧಕ ಮತ್ತು ಫ್ಲೋರಿನ್‌ಗಳು ಶಿಲೆಗಳಲ್ಲಿ ಒಟ್ಟಾರೆ ೧%ಗಿಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ. ಭೂಮಿಯ ಮೇಲ್ಭಾಗದ ದ್ರವ್ಯರಾಶಿಯಲ್ಲಿ ೪೭%ಕ್ಕಿಂತ ಹೆಚ್ಚು ಆಮ್ಲಜನಕವೇ ಇದೆಯೆಂದು ಎಫ್. ಡಬ್ಲ್ಯು. ಕ್ಲಾರ್ಕ್ ಕಂಡುಹಿಡಿದಿದ್ದಾನೆ. ಆಮ್ಲಜನಕವು ಮುಖ್ಯವಾಗಿ ಆಕ್ಸೈಡುಗಳಲ್ಲಿ ಕಾಣುತ್ತದೆ. ಸಿಲಿಕಾ, ಅಲ್ಯುಮಿನ, ಕಬ್ಬಿಣದ ಆಕ್ಸೈಡುಗಳು, ಸುಣ್ಣ, ಮೆಗ್ನೀಷಿಯ, ಪೊಟಾಷ್ ಮತ್ತು ಸೋಡ, ಇವುಗಳು ಮುಖ್ಯವಾದ ಆಕ್ಸೈಡುಗಳು. ಸಿಲಿಕಾವು ಒಂದು ಆಮ್ಲದಂತೆ ಕೆಲಸಮಾಡಿ ಸಿಲಿಕೇಟ್ ಗಳನ್ನು ರೂಪಿಸುತ್ತದೆ. ಅಗ್ನಿಶಿಲೆಯಲ್ಲಿ ಸಾಮಾನ್ಯವಾಗಿ ದೊರಕುವ ಸುಮಾರೆಲ್ಲ ಖನಿಜಗಳು ಈ ರೀತಿಯವೆ. ೧೬೭೨ರಲ್ಲಿ ವಿವಿಧ ಶಿಲೆಗಳನ್ನು ವಿಶ್ಲೇಷಿಸಿ ಕ್ಲಾರ್ಕ್‌ನು ಮಾಡಿದ ಲೆಕ್ಕಾಚಾರದ ಪ್ರಕಾರ, ಸರಾಸರಿ ಖನಿಜಾಂಶಗಳು ಈ ರೀತಿ ಇವೆ: SiO2=೫೯.೭೧%, Al2O3=೧೫.೪೧%, CaO=೪.೯೦%, MgO=೪.೩೬%, Na2O=೩.೫೫%, FeO=೩.೫೨%, K2O=೨.೮೦%, Fe2O3=೨.೬೩%, H2O=೧.೫೨%, TiO2=೦.೬೦%, P2O5=೦.೨೨%. ಇವು ಒಟ್ಟಾರೆ ೯೯.೨೨% ನಷ್ಟು ಭಾಗವನ್ನು ಆಕ್ರಮಿಸುತ್ತವೆ. ಉಳಿದ ಖನಿಜಗಳು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ.[೯]

[ಬದಲಾಯಿಸಿ] ಆಂತರಿಕ ರಚನೆ

ಭೂಮಿಯ ಒಳಭಾಗದಿಂದ ಹೊರ ವಾಯುಮಂಡಲದವರೆಗಿನ ಚಿತ್ರ.  Partially to scale
ಭೂಮಿಯ ಒಳಭಾಗದಿಂದ ಹೊರ ವಾಯುಮಂಡಲದವರೆಗಿನ ಚಿತ್ರ. Partially to scale

ಬೇರೆ ಘನರೂಪಿ ಗ್ರಹಗಳಂತೆ, ಭೂಮಿಯ ಒಳಭಾಗವನ್ನು ರಸಾಯನಿಕ ದೃಷ್ಟಿಯಿಂದ ವಿವಿಧ ಪದರಗಳಲ್ಲಿ ವಿಂಗಡಿಸಬಹುದು. ಭೂಮಿಯು ಸಿಲಿಕೇಟ್ನ ಒಂದು ಘನರೂಪಿ ಹೊರ ಚಿಪ್ಪನ್ನು, ಬಹಳ ಸ್ನಿಗ್ಧವಾದ ಒಂದು ಕವಚವನ್ನು, ಕವಚಕ್ಕಿಂತ ಬಹಳ ಕಡಿಮೆ ಸ್ನಿಗ್ಧತೆಯನ್ನು ಹೊಂದಿರುವ ದ್ರವರೂಪಿ ಹೊರ ಭೂಗರ್ಭವನ್ನು, ಮತ್ತು ಘನರೂಪಿ ಒಳ ಭೂಗರ್ಭವನ್ನು ಹೊಂದಿದೆ.

ಭೂಮಿಯ ಭೂವೈಜ್ಞಾನಿಕ ಪದರಗಳು[೧೦] ಮೇಲ್ಮೈನ ಕೆಳಗೆ ಈ ಕೆಳಗೆ ಸೂಚಿಸಿದ ಆಳದಲ್ಲಿವೆ:

ಆಳ ಪದರ
ಕಿ.ಮೀ.ಗಳು ಮೈಲಿಗಳು
೦–೬೦ ೦–೩೭ ಶಿಲಾಗೋಳ (ಇದರ ಆಳವು ಸ್ಥಳೀಯವಾಗಿ ೫ ರಿಂದ ೨೦೦ ಕಿ.ಮೀ.ಗಳವರೆಗೆ ಇರುತ್ತದೆ)
೦–೩೫ ೦–೨೨ ... ಚಿಪ್ಪು (ಇದರ ಆಳವು ಸ್ಥಳೀಯವಾಗಿ ೫ ರಿಂದ ೭೦ ಕಿ.ಮೀ.ಗಳವರೆಗೆ ಇರುತ್ತದೆ)
೩೫–೬೦ ೨೨–೩೭ ... ಕವಚದ ಹೊರಭಾಗ
೩೫–೨೮೯೦ ೨೨–೧೭೯೦ ಕವಚ
೧೦೦–೭೦೦ ೬೨–೪೩೫ ... ಅಸ್ಥೆನೋಗೋಳ
೨೮೯೦–೫೧೦೦ ೧೭೯೦–೩೧೬೦ ಭೂಗರ್ಭದ ಹೊರಭಾಗ
೫೧೦೦–೬೩೭೮ ೩೧೬೦–೩೯೫೪ ಭೂಗರ್ಭದ ಒಳಭಾಗ

[ಬದಲಾಯಿಸಿ] ಭೂಫಲಕಗಳು

ಭೂಮಿಯ ಪ್ರಮುಖ ಭೂಫಲಕಗಳನ್ನು ತೋರಿಸುತ್ತಿರುವ ಒಂದು ನಕ್ಷೆ.
ಭೂಮಿಯ ಪ್ರಮುಖ ಭೂಫಲಕಗಳನ್ನು ತೋರಿಸುತ್ತಿರುವ ಒಂದು ನಕ್ಷೆ.

ಬಹುತೇಕ ವಿಜ್ಞಾನಿಗಳು ಒಪ್ಪಿಕೊಳ್ಳುವ ಫಲಕ ರಚನಾ ಶಾಸ್ತ್ರದ ಪ್ರಕಾರ, ಭೂಮಿಯ ಹೊರಭಾಗವು ಎರಡು ಪದರಗಳಿಂದ ಕೂಡಿದೆ: ಚಿಪ್ಪು ಮತ್ತು ಕವಚದ ಘನೀಕೃತ ಮೇಲ್ಭಾಗಗಳನ್ನು ಒಳಗೊಂಡ ಶಿಲಾಗೋಳ. ಶಿಲಾಗೋಳದ ಕೆಳಗಿರುವ ಅಸ್ಥೆನೋಗೋಳದಲ್ಲಿ ಕವಚದ ಸ್ನಿಗ್ಧ ಒಳಭಾಗವು ಸೇರಿದೆ. ಕವಚವು ಅತ್ಯಂತ ಬಿಸಿಯಾದ ಮತ್ತು ಅತಿ ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದ ದ್ರವದಂತೆ ಕೆಲಸಮಾಡುತ್ತದೆ.

ಅಸ್ಥೆನೋಗೋಳದ ಮೇಲೆ ತೇಲುವ ಶಿಲಾಗೋಳವು ಹಲವು ಭೂಫಲಕಗಳಿಂದ ಕೂಡಿದೆ. ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಚಲಿಸುವ ಈ ಫಲಕಗಳ ತುದಿಗಳಲ್ಲಿ ಮೂರು ಬಗೆಗಳು ಇವೆ: convergent, divergent, and transform. ಭೂಕಂಪನಗಳು, ಅಗ್ನಿಪರ್ವತಗಳು, ಪರ್ವತಗಳ ನಿರ್ಮಾಣ, ಮತ್ತು ಸಾಗರ ಕಂದಕಗಳು, ಇವುಗಳು ಫಲಕಗಳ ತುದಿಗಳಲ್ಲಿ ಉಂಟಾಗುತ್ತವೆ.

ಮುಖ್ಯ ಭೂಫಲಕಗಳು:

ಸಣ್ಣವಾದರೂ ಗಮನಾರ್ಹವಾದ ಭೂಫಲಕಗಳಲ್ಲಿ ಭಾರತೀಯ ಭೂಫಲಕ, ಅರೇಬಿಯನ್ ಭೂಫಲಕ, ಕೆರಿಬಿಯನ್ ಭೂಫಲಕ, ನಕ್ಜಾ ಭೂಫಲಕ ಮತ್ತು ಸ್ಕೋಶಿಯಾ ಭೂಫಲಕಗಳು ಸೇರಿವೆ.

Equal-area map of the earth colored to show elevation
Equal-area map of the earth colored to show elevation

[ಬದಲಾಯಿಸಿ] ಮೇಲ್ಮೈ

ಭೂಮಿಯ ಮೇಲ್ಮೈಯು ಸ್ಥಳದಿಂದ ಸ್ಥಳಕ್ಕೆ ವಿಪರೀತವಾದ ಭಿನ್ನತೆಗಳನ್ನು ಹೊಂದಿದೆ. ಸುಮಾರು ೭೦% ಮೇಲ್ಮೈಯು ನೀರಿನಿಂದ ಆವೃತವಾಗಿದ್ದು, ಭೂಖಂಡ ಚಾಚಿನ ಬಹುತೇಕ ಭಾಗವು ಸಾಗರದ ಮಟ್ಟದ ಕೆಳಗಿದೆ. ಭೂಮಿಯ ನೆಲವನ್ನೆಲ್ಲಾ ಒಂದೇ ಎತ್ತರದಲ್ಲಿ ಸಮನಾಗಿ ಹರಡಿದರೆ, ನೀರು ೨೫೦೦ ಮೀ. ಗಳಿಗಿಂತ ಹೆಚ್ಚು ಮಟ್ಟಕ್ಕೆ ಏರುತ್ತದೆ. ನೀರಿನಿಂದ ಆವೃತವಾಗಿರದ ಉಳಿದ ೩೦% ಮೇಲ್ಮೈಯು ಪರ್ವತಗಳು, ಮರುಭೂಮಿಗಳು, ಸಮತಳಗಳು, ಪ್ರಸ್ಥಭೂಮಿಗಳು, ಇತ್ಯಾದಿಗಳಿಂದ ಕೂಡಿದೆ.

ಪ್ರಸ್ತುತದಲ್ಲಿ ಒಣನೆಲದ ೧೩.೩೧% ರಷ್ಟು ಮಾತ್ರ ಬೇಸಾಯಕ್ಕೆ ಯೋಗ್ಯವಾಗಿದೆ. ಆದರೆ, ೪.೭೧% ನೆಲದಲ್ಲಿ ಮಾತ್ರ ಶಾಶ್ವತ ಬೆಳೆಗಳನ್ನು ಬೆಳೆಯಬಹುದು.[೧೧] ಭೂಮಿಯ ನೆಲದ ಸುಮಾರು ೪೦% ಭಾಗವು ಪ್ರಸ್ತುತದಲ್ಲಿ ಬೇಸಾಯಕ್ಕೆ ಮತ್ತು ಮೇವಿಗಾಗಿ ಬಳಕೆಯಾಗುತ್ತಿದೆ. ಇದು ಸುಮಾರು ೩.೩ ೧೦ ಎಕರೆ ಬೇಸಾಯದ ಭೂಮಿ ಮತ್ತು ೮.೪ ೧೦ ಎಕರೆಗಳಷ್ಟು ಮೇವಿನ ಭೂಮಿ ಎಂದು ಅಂದಾಜು ಮಾಡಲಾಗಿದೆ.[೧೨]

ಚಿತ್ರ:Earth elevation histogram.png
ಭೂ-ಮೇಲ್ಮೈಯ ಎತ್ತರವನ್ನು ತೋರಿಸುವ ಆಯತ ಚಿತ್ರ - ಭೂಮಿಯ ಮೇಲ್ಮೈಯ ಸುಮಾರು ೭೧% ಭಾಗವು ನೀರಿನಿಂದ ಕೂಡಿದೆ.

[ಬದಲಾಯಿಸಿ] ವೈಪರೀತ್ಯ ಬಿಂದುಗಳು

ಟೆಂಪ್ಲೇಟು:Main ಎತ್ತರದ ವೈಪರೀತ್ಯಗಳು: (ಸಾಗರ ಮಟ್ಟಕ್ಕೆ ಸಾಪೇಕ್ಷವಾಗಿ ಮಾಪಿಸಿದಂತೆ)

[ಬದಲಾಯಿಸಿ] ಕ್ಷಿತಿಗೋಳ

ಭೂಮಿಯ ಹೊರ ಪದರವಾದ ಕ್ಷಿತಿಗೋಳವು ಮಣ್ಣಿನಿಂದ ರಚಿತವಾಗಿದ್ದು, ಮಣ್ಣನ್ನು ರೂಪಿಸುವ ಪ್ರಕ್ರಿಯೆಗಳು ಇಲ್ಲಿ ನಡೆಯುತ್ತವೆ. ಭೂಮಿಯ ಶಿಲಾಗೋಳ, ವಾಯುಮಂಡಲ, ಜಲಗೋಳ ಮತ್ತು ಜೈವಗೋಳಗಳ ಸೀಮೆಗಳಲ್ಲಿ ಕ್ಷಿತಿಗೋಳವು ಸ್ಥಿತವಾಗಿರುತ್ತದೆ.

[ಬದಲಾಯಿಸಿ] ಜಲಗೋಳ

ಟೆಂಪ್ಲೇಟು:Main

ಭೂಮಿಯ ಮೇಲೆ ನೀರಿನ ಹೇರಳತೆಯು ಈ ನಮ್ಮ "ನೀಲ ಗ್ರಹ"ವನ್ನು ಸೌರಮಂಡಲದ ಬೇರೆಲ್ಲಾ ಗ್ರಹಗಳಿಂದ ಪ್ರತ್ಯೇಕಿಸುತ್ತದೆ. ಸುಮಾರು ೭೦.೮% ಮೇಲ್ಮೈಯು ನೀರಿನಿಂದಾವೃತವಾಗಿದ್ದು, ೨೯.೨% ವಿಸ್ತೀರ್ಣವು ಮಾತ್ರ ಸ್ಥಿರ ನೆಲವಾಗಿದೆ.

ಭೂಮಿಯ ಜಲಗೋಳವು ಮುಖ್ಯವಾಗಿ ಸಾಗರಗಳಿಂದ ಕೂಡಿದ್ದರೂ, ಸರೋವರಗಳು, ಕೆರೆ-ನದಿಗಳು ಮತ್ತು ಭೂಗತ ನೀರು ಸಹ ಇದರಲ್ಲಿ ಸೇರಿವೆ. ಸಾಗರಗಳ ಸರಾಸರಿ ಆಳವು ೩,೭೯೪ ಮೀ. (೧೨,೪೪೭ ಅಡಿ)ಗಳಷ್ಟಿದ್ದು, ಭೂಖಂಡಗಳ ಸರಾಸರಿ ಎತ್ತರಕ್ಕಿಂತ ಐದು ಪಟ್ಟು ಇದೆ. ಸಾಗರಗಳ ದ್ರವ್ಯರಾಶಿಯು ಸುಮಾರು ೧.೩೫ ೧೦^೧೮ ಟನ್ನುಗಳು, ಅಥವಾ, ಭೂಮಿಯ ಒಟ್ಟು ದ್ರವ್ಯರಾಶಿಯ ೧/೪೪೦೦ ಭಾಗ.

[ಬದಲಾಯಿಸಿ] ವಾಯುಮಂಡಲ

ಟೆಂಪ್ಲೇಟು:Main

ಭೂಮಿಯ ವಾಯುಮಂಡಲವು ಸ್ಫುಟವಾದ ಮಿತಿರೇಖೆಯನ್ನು ಹೊಂದಿಲ್ಲ. ಬದಲಿಗೆ, ಮೇಲ್ಮೈಯಿಂದ ಹೆಚ್ಚು ಮೇಲೆ ಮೇಲೆ ಹೋಗುತ್ತಿದ್ದಂತೆ, ವಾಯುಮಂಡಲವು ನಿಧಾನವಾಗಿ ವಿರಳವಾಗುತ್ತಾ, ಕೊನೆಗೆ ಅಂತರಿಕ್ಷದ ನಿರ್ವಾತದಲ್ಲಿ ಬೆರೆತುಹೋಗುತ್ತದೆ. ವಾಯುಮಂಡಲದ ಮುಕ್ಕಾಲು ಪಾಲು ದ್ರವ್ಯರಾಶಿಯು ಮೇಲ್ಮೈಯಿಂದ ಮೊದಲ ೧೧ಕಿ.ಮೀ.ಗಳ ಅಂತರದಲ್ಲಿದೆ. ಈ ಕೆಳಗಿನ ಪದರವನ್ನು ಹವಾಗೋಳವೆಂದು ಕರೆಯಲಾಗುತ್ತದೆ. ಇದರ ಮೇಲಿನ ವಾಯುಮಂಡಲವನ್ನು ಸ್ತರಗೋಳ, ಮಧ್ಯಮಂಡಲ, ಮತ್ತು ಉಷ್ಣಗೋಳಗಳಾಗಿ ವಿಂಗಡಿಸಲಾಗಿದೆ. ಇವುಗಳ ಆಚೆಯಿರುವ ಬಹಿರ್ಗೋಳವು ಕ್ರಮೇಣವಾಗಿ ಭೂಮಿಯ ಕಾಂತಗೋಳದೊಂದಿಗೆ ಬೆರೆಯುತ್ತದೆ (ಇಲ್ಲಿ ಭೂಮಿಯ ಕಾಂತಕ್ಷೇತ್ರವು ಸೌರ ಮಾರುತದೊಂದಿಗೆ ಒಡನಾಡುತ್ತದೆ). ವಾಯುಮಂಡಲದ ಒಂದು ಭಾಗವಾದ ಓಜೋನ್ ಪದರವು ಭೂಮಿಯ ಜೀವಿಗಳಿಗೆ ಒಂದು ಮುಖ್ಯವಾದ ಅವಶ್ಯಕ ಭಾಗ.

ಭೂಮಿಯ ಮೇಲ್ಮೈಯಲ್ಲಿ ವಾಯು ಭಾರವು ಸರಾಸರಿ ೧೦೧.೩೨೫ kPa ಗಳಷ್ಟಿರುತ್ತದೆ. ವಾಯುವು ೭೮% ಸಾರಜನಕ ಮತ್ತು ೨೧% ಆಮ್ಲಜನಕಗಳಿಂದ ಕೂಡಿದ್ದು, ಅತ್ಯಲ್ಪ ಪ್ರಮಾಣದಲ್ಲಿ ನೀರಾವಿ ಮತ್ತಿತರ ಅನಿಲರೂಪಿ ಸಂಯುಕ್ತ ವಸ್ತುಗಳನ್ನು ಹೊಂದಿದೆ. ವಾಯುಮಂಡಲವು ಹಾನಿಕಾರಕ ಅತಿನೇರಳೆ ಕಿರಣಗಳನ್ನು ಹೀರಿಕೊಂಡು, ಉಷ್ಣತೆಯನ್ನು ಮಂದಿಸಿ, ನೀರಾವಿಯನ್ನು ಸಾಗಿಸಿ, ಉಪಯುಕ್ತ ಅನಿಲಗಳನ್ನು ಒದಗಿಸಿ, ಭೂಮಿಯ ಜೀವಜಂತುಗಳನ್ನು ರಕ್ಷಿಸುತ್ತದೆ. ಹವಾಮಾನವನ್ನು ನಿರ್ಧರಿಸುವುದರಲ್ಲಿ ವಾಯುಮಂಡಲವು ಒಂದು ಪ್ರಮುಖ ಅಂಗ.

ಜಲಜನಕದ ಅಣುಗಳು ತುಂಬಾ ಹಗುರವಾಗಿದ್ದು, ಭೂಮಿಯ ಸರಾಸರಿ ತಾಪಮಾನದಲ್ಲಿ ಇವು ಮುಕ್ತಿ ವೇಗವನ್ನು ತಲುಪುವುದರಿಂದ, ಭೂಮಿಯ ಮೇಲೆ ಶುದ್ಧ ಜಲಜನಕವು ಮೂಲರೂಪದಲ್ಲಿ ಸಿಗುವುದಿಲ್ಲ. For this reason, the Earth's environment is oxidizing, with consequences for the chemical nature of life which developed on the planet.

[ಬದಲಾಯಿಸಿ] ಹವಾಮಾನ

ಟೆಂಪ್ಲೇಟು:Main

ಎತ್ತರದ ಕಕ್ಷೆಯಿಂದ ಕಾಣುವಂತೆ ಭೂಮಿಯ ಒಂದು ಭಾಗ.
ಎತ್ತರದ ಕಕ್ಷೆಯಿಂದ ಕಾಣುವಂತೆ ಭೂಮಿಯ ಒಂದು ಭಾಗ.

ಭೂಮಿಯ ಹವಾಮಾನದಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳೆಂದರೆ, ಎರಡು ಧ್ರುವ ವಲಯಗಳು, ಎರಡು ಸಮಶೀತೋಷ್ಣ ವಲಯಗಳು, ಮತ್ತು ಒಂದು ಅಗಲವಾದ ಸಮಭಾಜಕ ವಲಯ. ಮಳೆ ಮತ್ತು ಹಿಮಪಾತಗಳು ಬಹಳಷ್ಟು ವಿಭಿನ್ನವಾಗಿ, ವರ್ಷಕ್ಕೆ ಹಲವು ಮೀಟರ್ ನೀರಿನಿಂದ ಹಿಡಿದು, ಒಂದು ಮಿ.ಮೀ. ಗಿಂದ ಕಡಿಮೆಯಷ್ಟು ಬೀಳುತ್ತವೆ.

ಸಾಗರ ಪ್ರವಾಹಗಳು ಹವಾಮಾನದ ಮೇಲೆ ಆಳವಾದ ಪ್ರಭಾವವನ್ನು ಬೀಳುತ್ತವೆ. ವಿಶಿಷ್ಟವಾಗಿ, ಅದ್ಭುತವಾದ ಲವಣೋಷ್ಣ ಪರಿಚಲನೆಯು ಅಪಾರವಾದ ಶಾಖವನ್ನು ಭೂಮಧ್ಯರೇಖೆಯ ವಲಯದಿಂದ ಧ್ರುವವಲಯಗಳ ಬಳಿಗೆ ಪಸರಿಸುತ್ತದೆ.

[ಬದಲಾಯಿಸಿ] ವಾಸಯೋಗ್ಯತೆ

ಯಾವುದೇ ಗ್ರಹವು ಜೀವಿಗಳನ್ನು ಪೋಷಿಸುವ ಸಾಮರ್ಥ್ಯವುಳ್ಳದ್ದಾಗಿದ್ದರೆ (ಜೀವಿಗಳು ಆ ಗ್ರಹದ ಮೇಲೆ ಉದ್ಭವವಾಗಿರದಿದ್ದರೂ) ಅದನ್ನು ವಾಸಯೋಗ್ಯವೆಂದು ಕರೆಯಲಾಗುತ್ತದೆ. ಇದುವರೆಗೆ ತಿಳಿದುಬಂದಂತೆ, ಭೂಮಿಯು ದ್ರವರೂಪಿ ನೀರು, ಜಟಿಲವಾದ ಸಾವಯವ ಕಣಗಳು ಒಗ್ಗೂಡುವಂತಹ ಪರಿಸರ, ಮತ್ತು ಉಪಾಪಚಯವನ್ನು ಉಳಿಸಿಕೊಂಡು ಹೋಗಲು ಅವಶ್ಯಕವಾದ ಶಕ್ತಿ, ಇವುಗಳನ್ನು ಒದಗಿಸುತ್ತದೆ.[೧೪] ಸೂರ್ಯನಿಂದ ಭೂಮಿಯ ದೂರ, ಅದರ ಕಕ್ಷೀಯ ಉತ್ಕೇಂದ್ರೀಯತೆ, ಅಕ್ಷೀಯ ಪರಿಭ್ರಮಣ ಕಾಲ, ಅಕ್ಷೀಯ ಓರೆ, ಭೂವೈಜ್ಞಾನಿಕ ಇತಿಹಾಸ, ವಾಯುಮಂಡಲ ಮತ್ತು ಕಾಂತಕ್ಷೇತ್ರಗಳ ಉಳಿವು, ಇವೆಲ್ಲವೂ ಈ ಗ್ರಹದ ಮೇಲೆ ಜೀವಿಗಳ ಉದ್ಭವ ಮತ್ತು ಪೋಷಣೆಗಳಿಗೆ ಅಡಿ ಮಾಡಿಕೊಡುತ್ತವೆ.[೧೫]

[ಬದಲಾಯಿಸಿ] ಜೈವಗೋಳ

ಭೂಮಿಯ ಮೇಲಿನ ಜೀವಜಂತುಗಳು ಒಂದು ಜೈವಗೋಳವನ್ನು ರೂಪಿಸುತ್ತವೆ. ಈ ಜೈವಗೋಳವು ಸುಮಾರು ೩೫೦ ಕೋಟಿ ವರ್ಷಗಳ ಹಿಂದೆ ವಿಕಸಿಸಲು ಶುರುವಾಯಿತೆಂದು ನಂಬಲಾಗಿದೆ. ಭೂಮಿಯ ಮೇಲಿನ ಸಮುದಾಯಗಳು ಅಧಿಕೃತವಾಗಿ ತಿಳಿದುಕೊಂಡಂತೆ, ಖಂಡಿತವಾಗಿಯೂ ಜೀವಿಗಳು ಅಸ್ತಿತ್ವದಲ್ಲಿರುವುದು ಭೂಮಿಯ ಮೇಲೆ ಮಾತ್ರ. ಇದಲ್ಲದೆ, ಜೈವಗೋಳಗಳು ಬಹಳ ವಿರಳ ಎಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ.

ಜೈವಗೋಳವನ್ನು ಹಲವು ಬಯೋಮ್ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಬಯೋಮ್‌ನಲ್ಲಿ ಸ್ಥೂಲವಾಗಿ ಒಂದೇ ರೀತಿಯ ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳು ಕಂಡುಬರುತ್ತವೆ. ಒಣ ನೆಲದ ಮೇಲೆ, ಮುಖ್ಯವಾಗಿ ಅಕ್ಷಾಂಶ ರೇಖೆ ಮತ್ತು ಸಾಗರದಿಂದ ಇರುವ ಎತ್ತರವು ಬಯೋಮ್‌ಗಳನ್ನು ಪ್ರತ್ಯೇಕಿಸುತ್ತವೆ. ಆರ್ಕ್‌ಟಿಕ್, ಅಂಟಾರ್ಕ್‌ಟಿಕ್ ವೃತ್ತ ಅಥವಾ ಎತ್ತರದಲ್ಲಿರುವ ಬಯೋಮ್‌ಗಳಲ್ಲಿ ಹೆಚ್ಚು ಜೀವಿಗಳು ಸಿಗುವುದಿಲ್ಲ. ಆದರೆ, ಸಮಭಾಜಕದ ಬಳಿಯಿರುವ ಬಯೋಮ್‌ಗಳಲ್ಲಿ ಬಹಳಷ್ಟು ಜೀವಿಗಳನ್ನು ಕಾಣಬಹುದು.

[ಬದಲಾಯಿಸಿ] ಸ್ವಾಭಾವಿಕ ಸಂಪನ್ಮೂಲಗಳು ಮತ್ತು ನೆಲದ ಬಳಕೆ

ಮಾನವರು ತಮ್ಮ ಉಪಯೋಗಗಳಿಗೆ ಬಳಸಬಹುದಾದ ಸಂಪನ್ಮೂಲಗಳನ್ನು ಭೂಮಿಯು ಒದಗಿಸುತ್ತದೆ. ಈ ಸಂಪನ್ಮೂಲಗಳಲ್ಲಿ ಖನಿಜ ಇಂಧನಗಳಂಥ ಕೆಲವು ನವೀಕರಿಸಲು ಅಯೋಗ್ಯವಾಗಿದ್ದು, ಇವುಗಳನ್ನು ಕಡಿಮೆ ಸಮಯಾವಧಿಯಲ್ಲಿ ನವೀಕರಿಸಲಾಗುವುದಿಲ್ಲ.

ಖನಿಜ ಇಂಧನಗಳ ದೊಡ್ಡ ಶೇಖರಣೆಗಳು ಭೂಮಿಯ ಚಿಪ್ಪಿನಲ್ಲಿ ಕಂಡುಬರುತ್ತವೆ. ಈ ಬಗೆಯ ಇಂಧನಗಳಲ್ಲಿ ಕಲ್ಲಿದ್ದಿಲು, ಕಲ್ಲೆಣ್ಣೆ, ನಿಸರ್ಗಾನಿಲ, ಮತ್ತು ಮೀಥೇನ್ಗಳು ಸೇರಿವೆ. ಈ ಶೇಖರಣೆಗಳನ್ನು ಮಾನವರು ಶಕ್ತಿಯ ಉತ್ಪನ್ನಕ್ಕಾಗಿ ಮತ್ತು ರಾಸಾಯನಿಕ ಉತ್ಪನ್ನಗಳಿಗೆ ಆದಾನವಾಗಿ ಬಳಸುತ್ತಾರೆ. ಸವಕಳಿ ಮತ್ತು ಭೂಫಲಕ ಚಲನೆಗಳಿಂದುಂಟಾಗುವ ಅದಿರು ಉತ್ಪತ್ತಿ ಪ್ರಕ್ರಿಯೆಯಿಂದಲೂ ಭೂಮಿಯ ಚಿಪ್ಪಿನಲ್ಲಿ ಅದಿರಿನ ಶೇಖರಣೆಗಳು ರೂಪುಗೊಳ್ಳುತ್ತವೆ.[೧೬] ಈ ಶೇಖರಣೆಗಳು ಹಲವು ಲೋಹ ಮತ್ತಿತರ ಉಪಯುಕ್ತ ಮೂಲವಸ್ತುಗಳ ಸಾಂದ್ರೀಕರಿತ ಆಗರಗಳಾಗಿರುತ್ತವೆ.

ಭೂಮಿಯ ಜೈವಗೋಳವು ಮಾನವರಿಗೆ ಉಪಯುಕ್ತವಾಗುವ ಹಲವು ಜೈವಿಕ ಉತ್ಪನ್ನಗಳನ್ನು ಸೃಷ್ಟಿಸುತ್ತದೆ. ಇವುಗಳಲ್ಲಿ ಆಹಾರ, ಮರ, ಔಷಧಿಗಳು, ಆಮ್ಲಜನಕ, ಹಲವು ಜೈವಿಕ ತ್ಯಾಜ್ಯವಸ್ತುಗಳ ಮರುಬಳಕೆ, ಇತ್ಯಾದಿಗಳು ಸೇರಿವೆ. ನೆಲದ ಮೇಲಿನ ಪರಿಸರ ವ್ಯವಸ್ಥೆಗಳು ಸಿಹಿನೀರು ಮತ್ತು ಮೇಲ್ಮಣ್ಣಿನ ಮೇಲೆ ಅವಲಂಬಿತವಾಗಿದ್ದರೆ, ಸಾಗರಗಳಲ್ಲಿನ ಪರಿಸರ ವ್ಯವಸ್ಥೆಗಳು ನೆಲದಿಂದ ಸಮುದ್ರಕ್ಕೆ ಕೊಚ್ಚಿ ಬಂದು ಕರಗಿದ ಪೋಷಕಗಳ ಮೇಲೆ ಅವಲಂಬಿತವಾಗಿರುತ್ತವೆ.[೧೭] ೧೯೯೩ರಲ್ಲಿ ಮಾನವರಿಂದ ನೆಲದ ಬಳಕೆ ಸುಮಾರು ಈ ಕೆಳಗಿನಂತಿತ್ತು:

ನೆಲದ ಬಳಕೆ ಶೇಕಡಾ
ವ್ಯವಸಾಯಯೋಗ್ಯ ನೆಲ: ೧೩.೧೩%[೧೧]
ಶಾಶ್ವತ ಬೆಳೆಗಳು: ೪.೭೧%[೧೧]
ಶಾಶ್ವತ ಹುಲ್ಲುಗಾವಲುಗಳು: ೨೬%
ಕಾಡುಗಳು: ೩೨%
ನಾಗರಿಕ ವಲಯಗಳು: ೧.೫%
ಇತರೆ: ೩೦%

೧೯೯೩ರಲ್ಲಿ ಮಾಡಿದ ಅಂದಾಜಿನ ಪ್ರಕಾರ ನೀರಾವರಿಗೆ ಒಳಪಟ್ಟಿದ್ದ ನೆಲದ ವಿಸ್ತೀರ್ಣವು ೨,೪೮೧,೨೫೦ ಕಿ.ಮೀ..[೧೧]

[ಬದಲಾಯಿಸಿ] ಸ್ವಾಭಾವಿಕ ಮತ್ತು ಪಾರಿಸರಿಕ ಹಾನಿಗಳು

ಭೂಮಿಯ ಮೇಲೆ ಹಲವು ವಿಸ್ತಾರ ವಲಯಗಳು ಸುಮಾರು ನಿರಂತರವಾಗಿ ಚಂಡಮಾರುತ, ತುಫಾನುಗಳಂಥ ವಿಪರೀತ ಹವೆಗಳಿಗೆ ಒಳಪಟ್ಟಿರುತ್ತವೆ. ಹಲವೆಡೆಗಳು ಭೂಕಂಪನ, ಭೂಪಾತ, ಸುನಾಮಿ, ಜ್ವಾಲಾಮುಖಿ, ಪ್ರಳಯ, ಬರಗಾಲ, ಮತ್ತಿತರ ವಿಪತ್ತು ಮತ್ತು ನಾಶಗಳನ್ನು ಎದುರಿಸುತ್ತವೆ.

ಹಲವು ಸ್ಥಳೀಯ ಪ್ರದೇಶಗಳು ಮಾನವರಿಂದುಂಟಾದ ಜಲ ಮತ್ತು ವಾಯು ಮಾಲಿನ್ಯ, ಆಮ್ಲ ಮಳೆ ಮತ್ತು ವಿಷಕಾರಕ ಪದಾರ್ಥಗಳು, ಸಸ್ಯಸಂಪತ್ತಿನ ನಾಶ (ಅತಿಯಾದ-ಮೇಯುವಿಕೆ, ಅರಣ್ಯನಾಶ, ವನ್ಯಜೀವಿಗಳ ನಾಶ, ಪ್ರಭೇದಗಳ ನಾಶ, ಸವಕಳಿ) ಮುಂತಾದ ನಾಶಕಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಾರ್ಖಾನೆಗಳಿಂದ ಇಂಗಾಲದ-ಡೈ-ಆಕ್ಸೈಡ್‌ನ ಉತ್ಪತ್ತಿಯು ವಾಯುಗುಣದಲ್ಲಿ ದೀರ್ಘಾವಧಿ ಮಾರ್ಪಾಡುಗಳನ್ನು ಉಂಟುಮಾಡುತ್ತಿವೆ. ಇದರಿಂದ, ಹಿಮನದಿಗಳು ಮತ್ತು ಆರ್ಕ್‌ಟಿಕ್ ಹಿಮದ ಕರಗುವಿಕೆ, ಇನ್ನೂ ಹೆಚ್ಚಿನ ವಿಪರೀತ ತಾಪಮಾನಗಳು, ಹವಾಮಾನದಲ್ಲಿ ಗಮನಾರ್ಹವಾದ ಬದಲಾವಣೆಗಳು, ಭೂಮಿಯಾದ್ಯಂತ ಸರಾಸರಿ ಸಾಗರ ಮಟ್ಟದ ಏರಿಕೆ ಸೇರಿದಂತೆ ಹಲವು ಪರಿಣಾಮಗಳು ಉಂಟಾಗುವ ನಿರೀಕ್ಷೆಯಿದೆ.[೧೮]

[ಬದಲಾಯಿಸಿ] ಮಾನವ ಭೂವಿವರಣೆ

ರಾತ್ರಿಯಲ್ಲಿ ಭೂಮಿ.  ಇದನ್ನು ಪವನ ವಿಜ್ಞಾನ/ಉಪಗ್ರಹ ಮಾಹಿತಿಗಳನ್ನು ಭೂಮಿಯ ರಾತ್ರಿಚಿತ್ರದ ಛದ್ಮನದ ಮೇಲೆ ಅಧ್ಯಾರೋಪಿಸಿ ತಯಾರಿಸಲಾಗಿದೆ.  ಈ ಚಿತ್ರವು ಛಾಯಾಚಿತ್ರವಾಗಿರದೆ, ಇದರಲ್ಲಿನ ಹಲವು ಭಾಗಗಳು ನೇರ ವೀಕ್ಷಕನಿಗೆ ಕಾಣುವುದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿವೆ.
ರಾತ್ರಿಯಲ್ಲಿ ಭೂಮಿ. ಇದನ್ನು ಪವನ ವಿಜ್ಞಾನ/ಉಪಗ್ರಹ ಮಾಹಿತಿಗಳನ್ನು ಭೂಮಿಯ ರಾತ್ರಿಚಿತ್ರದ ಛದ್ಮನದ ಮೇಲೆ ಅಧ್ಯಾರೋಪಿಸಿ ತಯಾರಿಸಲಾಗಿದೆ. ಈ ಚಿತ್ರವು ಛಾಯಾಚಿತ್ರವಾಗಿರದೆ, ಇದರಲ್ಲಿನ ಹಲವು ಭಾಗಗಳು ನೇರ ವೀಕ್ಷಕನಿಗೆ ಕಾಣುವುದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿವೆ.

Earth has approximately 6,600,000,000 human inhabitants.[೧೯][೨೦] Projections indicate that the world's human population will reach seven billion in 2013 and 9.2 billion[೨೧] in 2050. Most of the growth is expected to take place in developing nations. Human population density varies widely around the world, but a majority live in Asia. By 2020, 60% of the world's population is expected to be living in urban, rather than rural, areas.[೨೨]

It is estimated that only one eighth of the surface of the Earth is suitable for humans to live on — three-quarters is covered by oceans, and half of the land area is desert (14%),[೨೩] high mountains (27%),[೨೪] or other less suitable terrain. The northernmost permanent settlement in the world is Alert, on Ellesmere Island in Nunavut, Canada.[೨೫] (82°28′N) The southernmost is the Amundsen-Scott South Pole Station, in Antarctica, almost exactly at the South Pole. (90°S)

Independent sovereign nations claim all of the planet's land surface, with the exception of some parts of Antarctica. As of 2007 there are 201 sovereign states, including the 192 United Nations member states. In addition, there are 59 dependent territories, and a number of autonomous areas, territories under dispute and other entities. Historically, Earth has never had a sovereign government with authority over the entire globe, although a number of nation-states have striven for world domination and failed.

The United Nations is a worldwide intergovernmental organization that was created with the goal of intervening in the disputes between nations, thereby avoiding armed conflict. It is not, however, a world government. While the U.N. provides a mechanism for international law and, when the consensus of the membership permits, armed intervention,[೨೬] it serves primarily as a forum for international diplomacy.

In total, about 400 people have been outside the Earth's atmosphere as of 2004, and, of these, twelve have walked on the Moon. Normally the only humans in space are those on the International Space Station. The station's crew of three people is usually replaced every six months.ಟೆಂಪ್ಲೇಟು:-

[ಬದಲಾಯಿಸಿ] ಭವಿಷ್ಯ

ಸೂರ್ಯನು ಕೆಂಪು ದೈತ್ಯ ಹಂತದಲ್ಲಿ ಪ್ರಸ್ತುತದ ಸುಮಾರು ೧೦೦ ಪಟ್ಟು ಗಾತ್ರಕ್ಕೆ ಹಿಗ್ಗಿದ ಮೇಲೆ ಭೂಮಿಯ ಮೇಲಿನ ಕೃತಕ ಸಂಕೀರ್ಣಗಳ ಅವಶೇಷಗಳನ್ನು ತೋರಿಸುತ್ತಿರುವ ಕಲಾಕಾರನ ಊಹೆಯ ಚಿತ್ರ.
ಸೂರ್ಯನು ಕೆಂಪು ದೈತ್ಯ ಹಂತದಲ್ಲಿ ಪ್ರಸ್ತುತದ ಸುಮಾರು ೧೦೦ ಪಟ್ಟು ಗಾತ್ರಕ್ಕೆ ಹಿಗ್ಗಿದ ಮೇಲೆ ಭೂಮಿಯ ಮೇಲಿನ ಕೃತಕ ಸಂಕೀರ್ಣಗಳ ಅವಶೇಷಗಳನ್ನು ತೋರಿಸುತ್ತಿರುವ ಕಲಾಕಾರನ ಊಹೆಯ ಚಿತ್ರ.

ಭೂಮಿಯ ಭವಿಷ್ಯವು ಸೂರ್ಯನ ಭವಿಷ್ಯದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಸೂರ್ಯನ ಒಳಭಾಗದಲ್ಲಿ ಹೀಲಿಯಂ ಬೂದಿಯ ನಿರಂತರ ಶೇಖರಣೆಯ ಕಾರಣದಿಂದ, ಸೂರ್ಯನ ಒಟ್ಟಾರೆ ಕಾಂತೀಯತೆಯು ನಿಧಾನವಾಗಿ ಹೆಚ್ಚಾಗುತ್ತದೆ. ಸುಮಾರು ೧೧೦ ಕೋಟಿ ವರ್ಷಗಳಲ್ಲಿ ಕಾಂತೀಯತೆಯು ೧೦%ನಷ್ಟು ಮತ್ತು ಸುಮಾರು ೩೫೦ ಕೋಟಿ ವರ್ಷಗಳಲ್ಲಿ ೪೦% ಹೆಚ್ಚುತ್ತದೆ.[೨೭] ಹೆಚ್ಚಾದ ಈ ವಿಕಿರಣದಿಂದ, ಭೂಮಿಯ ಸಾಗರಗಳ ನಾಶವೂ ಸೇರಿದಂತೆ ಹಲವಾರು ಘೋರ ಪರಿಣಾಮಗಳು ಉಂಟಾಗುತ್ತವೆಂದು ಹವಾಮಾನ ಮಾದರಿಗಳು ಸೂಚಿಸುತ್ತವೆ.[೨೮]

ಭೂಮಿಯ ಮೇಲ್ಮೈ ತಾಪಮಾನವು ಹೆಚ್ಚಿದಂತೆ, ಅಜೈವಿಕ CO2 ಆವರ್ತದ ವೇಗವು ಹೆಚ್ಚಾಗುತ್ತದೆ. ಇದರಿಂದ, ಇನ್ನು ೯೦ ಕೋಟಿ ವರ್ಷಗಳಲ್ಲಿ ಇಂಗಾಲದ ಡೈ ಆಕ್ಸೈಡ್ನ ಸಾಂದ್ರತೆಯು ಗಿಡ-ಮರಗಳಿಗೆ ಮಾರಕವಾಗುವಷ್ಟು (C4 ದ್ಯುತಿಸಂಶ್ಲೇಷಣೆಗೆ ಲಕ್ಷದಲ್ಲಿ ೧ ಭಾಗದಷ್ಟು ಸಾಂದ್ರತೆ ಅತ್ಯವಶ್ಯಕ) ಕಡಿಮೆಯಾಗುತ್ತದೆ. ಆದರೆ, ಸೂರ್ಯನು ಶಾಶ್ವತವಾಗಿ ಸ್ಥಿರವಾಗಿದ್ದಿದ್ದರೂ, ಭೂಮಿಯು ನಿಧಾನವಾಗಿ ತಣ್ಣಗಾಗುತ್ತಿರುವುದರಿಂದ, ಅಗ್ನಿಪರ್ವತ ಚಟುವಟಿಕೆಗಳು ಕಡಿಮೆಯಾಗಿ, ಭೂಮಿಯ ಬಹುತೇಕ ವಾಯುಮಂಡಲ ಮತ್ತು ಸಾಗರಗಳು ನಶಿಸಿಹೋಗಿರುತ್ತಿದ್ದವು.[೨೯] ಹೆಚ್ಚು ವಿಶಿಷ್ಟವಾಗಿ, ಭೂಮಿಯ ಚಿಪ್ಪಿನ ಕಡಿಮೆಯಾದ ತಾಪಮಾನವು ಈಗಿಗಿಂತ ಹೆಚ್ಚು ನೀರನ್ನು ತನ್ನ ಮೂಲಕ ಜಿನುಗಲು ಬಿಡುತ್ತದೆ. ಹೀಗಾಗಿ, ಇನ್ನು ಸುಮಾರು ೧೦೦ ಕೋಟಿ ವರ್ಷಗಳಲ್ಲಿ ಸೂರ್ಯನ ಪ್ರಭಾವವಿಲ್ಲ್ದಿದ್ದರೂ ಮೇಲ್ಮೈ ನೀರು ಪೂರ್ಣವಾಗಿ ಇಂಗುತ್ತದೆ.[೩೦]

ಇನ್ನು ೫೦೦ ಕೋಟಿ ವರ್ಷಗಳಲ್ಲಿ ತನ್ನ ಜೀವನ ಚಕ್ರದ ಭಾಗವಾಗಿ, ಸೂರ್ಯವು ಕೆಂಪು ದೈತ್ಯವಾಗಿ ಉಬ್ಬುತ್ತದೆ. ಭೂಮಿಯ ಪ್ರಸ್ತುತದ ಕಕ್ಷೆಗಿರುವ ದೂರದ (೧ ಖಗೋಳ ಮಾನ) ೯೯%ರಷ್ಟು ದೂರದ ಗಾತ್ರಕ್ಕೆ ಸೂರ್ಯವು ಹಿಗ್ಗುತ್ತದೆ ಎಂದು ಮಾದರಿಗಳು ಹೇಳುತ್ತವೆ. ಆದರೆ, ಅಷ್ಟು ಹೊತ್ತಿಗೆ ಸೂರ್ಯನ ದ್ರವ್ಯರಾಶಿಯ ಕುಗ್ಗುವಿಕೆಯ ಕಾರಣ, ಭೂಮಿಯ ಕಕ್ಷೆಯು ಸುಮಾರು ೧.೭ ಖ.ಮಾಗಳ ದೂರಕ್ಕೆ ಸರಿಯಬಹುದು. ಹೀಗೆ, ಭೂಮಿಯು ಸೂರ್ಯನ ಹೊರ ವಾಯುಮಂಡಲದಿಂದ ಆವೃತವಾಗುವುದನ್ನು ತಪ್ಪಿಸಿಕೊಂಡರೂ, ಸೂರ್ಯನ ಸಾಮೀಪ್ಯತೆಯ ಕಾರಣದಿಂದ ಬಹುತೇಕ ಎಲ್ಲಾ ಜೀವಿಗಳೂ ನಶಿಸಿಹೋಗುತ್ತವೆ.[೨೭]

[ಬದಲಾಯಿಸಿ] ಉಲ್ಲೇಖಗಳು

  1. G.B. Dalrymple, 1991, "The Age of the Earth", Stanford University Press, California, ISBN 0-8047-1569-6.
  2. A. Morbidelli et al, 2000, "Source Regions and Time Scales for the Delivery of Water to Earth", Meteoritics & Planetary Science, vol. 35, no. 6, pp. 130920.
  3. W. Ford Doolitte, "Uprooting the Tree of Life", Scientific American, Feb. 2000.
  4. L. V. Berkner, L. C. Marshall, 1965, "On the Origin and Rise of Oxygen Concentration in the Earth's Atmosphere", Journal of the Atmospheric Sciences, Vol. 22, No. 3, pp. 22561.
  5. J.B. Murphy, R.D. Nance, "How do supercontinents assemble?", American Scientist, vol. 92, pp. 32433.
  6. J.L. Kirschvink, 1992, "Late Proterozoic Low-Latitude Global Glaciation: The Snowball Earth", The Proterozoic Biosphere, pp 5152.
  7. D. Raup & J. Sepkoski, 1982, "Mass extinctions in the marine fossil record", Science, vol. 215, pp. 150103.
  8. http://earthref.org/cgi-bin/er.cgi?s=erda.cgi?n=547
  9. ಟೆಂಪ್ಲೇಟು:1911
  10. T. H. Jordan, "Structural Geology of the Earth's Interior", Proceedings National Academy of Science, 1979, Sept., 76(9): 4192–4200.
  11. ೧೧.೦ ೧೧.೧ ೧೧.೨ ೧೧.೩ CIA: The World Factbook, "World".
  12. FAO, 1995, "United Nations Food and Agricultural Organization Production Yearbook", 49.
  13. "Deep Ocean Studies". Ocean Studies. RAIN National Public Internet and Community Technology Center. Retrieved on 2006-04-02.
  14. Staff (September, 2003). Astrobiology Roadmap. NASA, Lockheed Martin. Retrieved on 2007-03-10.
  15. Dole, Stephen H. (1970). Habitable Planets for Man, 2nd edition, American Elsevier Publishing Co.. ISBN 0-444-00092-5. Retrieved on 2007-03-11.
  16. Staff (November 24, 2006). Mineral Genesis: How do minerals form?. Non-vertebrate Paleontology Laboratory, Texas Memorial Museum. Retrieved on 2007-04-01.
  17. Rona, Peter A. (2003). "Resources of the Sea Floor". Science 299 (5607): 673–674. Retrieved on 2007-02-04.
  18. Staff (February 2, 2007). Evidence is now ‘unequivocal’ that humans are causing global warming – UN report. United Nations. Retrieved on 2007-03-07.
  19. Currently it is closer to 6.6 billion than 6.5 billion. It will reach 6.6 billion in June 2007.
  20. David, Leonard. "Planet's Population Hit 6.5 Billion Saturday", Live Science, 2006-02-24. Retrieved on 2006-04-02. 
  21. Staff. World Population Prospects: The 2006 Revision. United Nations. Retrieved on 2007-03-07.
  22. Staff (2007). Human Population: Fundamentals of Growth: Growth. Population Reference Bureau. Retrieved on 2007-03-31.
  23. Peel, M. C.; Finlayson, B. L.; McMahon, T. A. (2007). "Updated world map of the Köppen-Geiger climate classification". Hydrology and Earth System Sciences Discussions 4: 439–473. Retrieved on 2007-03-31.
  24. Staff. Themes & Issues. Secretariat of the Convention on Biological Diversity. Retrieved on 2007-03-29.
  25. Staff (2006-08-15). Canadian Forces Station (CFS) Alert. Information Management Group. Retrieved on 2007-03-31.
  26. Staff. International Law. United Nations. Retrieved on 2007-03-27.
  27. ೨೭.೦ ೨೭.೧ Sackmann, I.-J.; Boothroyd, A. I.; Kraemer, K. E. (1993). "Our Sun. III. Present and Future". Astrophysical Journal 418: 457-468. Retrieved on 2007-03-31.
  28. Kasting, J.F. (1988). "Runaway and Moist Greenhouse Atmospheres and the Evolution of Earth and Venus". Icarus 74: 472-494. Retrieved on 2007-03-31.
  29. Guillemot, H.; Greffoz, V. (Mars 2002). "Ce que sera la fin du monde" (in French). Science et Vie N° 1014.
  30. Carrington, Damian. "Date set for desert Earth", BBC News, February 21, 2000. Retrieved on 2007-03-31. 



ನಮ್ಮ ಸೌರವ್ಯೂಹ

ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಕ್ಷುದ್ರಗ್ರಹ ಹೊನಲು
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ
ಇತರ ಭಾಷೆಗಳು

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu