ಕಾಲ
From Wikipedia
ಕಾಲ ಅಥವ ಸಮಯ ಎರಡು ದೃಷ್ಟಿಕೋನಗಳಿಂದ ವಿವರಿಸಲ್ಪಟ್ಟಿದೆ. ಒಂದು ದೃಷ್ಟಿಯಲ್ಲಿ ಕಾಲವು ಬ್ರಹ್ಮಾಂಡದ ಮೂಲ ಸ್ವತ್ತಾಗಿದ್ದು, ಅದರ ಆಯಾಮದಲ್ಲಿ ಎಲ್ಲಾ ಘಟನೆಗಳು ಸಂಭವಿಸುತ್ತವೆಂಬುದು. ಇನ್ನೊಂದು ದೃಷ್ಟಿಯಲ್ಲಿ ಕಾಲವೆಂಬುದು ಮಾನವನು ಬ್ರಹ್ಮಾಂಡವನ್ನು ಅರ್ಥ ಮಾಡಿಕೊಳ್ಳಲು ಘಟನೆಗಳ ಮಧ್ಯವನ್ನು ಅಳೆಯಲು ಸೃಷ್ಟಿಸಿರುವ ಒಂದು ಕಲ್ಪನೆ ಎಂದು.
ವಿಜ್ಞಾನದಲ್ಲಿ ಕಾಲವನ್ನು ಜಾಗದೊಂದಿಗೆ (space) ಮೂಲಭೂತ ಮಾಪನಗಳೆಂದು ಪರಿಗಣಿಸಲಾಗುತ್ತದೆ. ಈ ಮೂಲಭೂತ ಮಾಪನಗಳನ್ನು ಇತರ ಮಾಪನಗಳ ಭಾಗವಾಗಿ ನಿರೂಪಿಸಲಾಗದಂತವು. ಇವುಗಳನ್ನು ಅಳತೆ ಮಾಡುವುದರಿಂದ ಮಾತ್ರ ಲೆಕ್ಕ ಹಾಕಬಹುದು. ಹೀಗಾಗಿ ಕಾಲವನ್ನು ಯಾವುದಾದರು ನಿರ್ಧಿಷ್ಟ ವೇಳೆಗಳ ಅಂತರದಲ್ಲಿ ನಡೆಯುವ ಘಟನೆಗಳ ಮೂಲಕ ಅಳತೆ ಮಾಡಲಾಗುತ್ತದೆ.