ಹೀರೋ ಹೋಂಡ
From Wikipedia
ಪ್ರಕಾರ: | ಸಾರ್ವಜನಿಕ ಸಂಸ್ಥೆ ಮುಂಬೈ ಸ್ಟಾಕ್ ಎಕ್ಸ್ಚೇಂಜ್:HEROHONDA M |
---|---|
ಬುನಾದಿ: | ಜನವರಿ ೧೯, ೧೯೮೪ |
ಕೇಂದ್ರ ಸ್ಥಳ: | ಗುರಗಾಂವ್, ಹರಿಯಾಣ, ಭಾರತ |
ಮುಖ್ಯವಾದ ಸಿಬ್ಬಂದಿ: | ಬ್ರಿಜ್ಮೋಹನ್ ಲಾಲ್ ಮುಂಜಲ್ (ಚೇರ್ಮನ್ ಮತ್ತು ನಿರ್ವಾಹಕ ನಿರ್ದೇಶಕ) |
ಕೈಗಾರಿಕೆ: | ಆಟೋಮೊಟಿವ್ |
ಉತ್ಪನ್ನಗಳು : | ದ್ವಿಚಕ್ರವಾಹನಗಳು |
ವಹಿವಾಟು : | ೭,೩೫೬ ಕೋಟಿ ರೂಪಾಯಿಗಳು ೨೦೦೪-೨೦೦೫ |
ಅಂತರ್ಜಾಲ: | www.herohonda.com |
ಹೀರೋ ಹೋಂಡ - ಭಾರತದ ದ್ವಿಚಕ್ರ ಮಾದರಿಗಳಲ್ಲೊಂದು. ಹೀರೋ ಮತ್ತು ಹೋಂಡ ಕಂಪನಿಗಳ ಸಹಯೋಗದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ವಾಹನವು, ಎರಡೂ ಕಂಪನಿಗಳ ಹೆಸರುಗಳನ್ನೊಳಗೊಂಡಂತೆ ಹೀರೋ ಹೋಂಡ ಎಂದು ನಾಮಕರಣ ಮಾಡಲ್ಪಟ್ಟಿತು.
[ಬದಲಾಯಿಸಿ] ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್
ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್ ಎಂಬುದು ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕೆಯ ಸಂಸ್ಥೆ. ಹೀರೋ ಹೋಂಡ ಜಂಟಿ ಸಹಯೋಗವು ೧೯೮೪ರಲ್ಲಿ ಹೀರೋ ಗ್ರೂಪ್ ಮತ್ತು ಜಪಾನ್ ದೇಶದ ಹೋಂಡ ಸಂಸ್ಥೆಯೊಂದಿಗೆ ಪ್ರಾರಂಭವಾಯಿತು.
ಈ ಸಂಸ್ಥೆಯು ಪ್ರಪಂಚದ ಅತ್ಯಂತ ದೊಡ್ಡ ದ್ವಿಚಕ್ರ ತಯಾರಿಕೆಯ ಸಂಸ್ಥೆ ಎಂದು ೨೦೦೧ರಿಂದ ಪ್ರಖ್ಯಾತಿ ಪಡೆಯಿತು. ಆ ಒಂದು ವರ್ಷದಲ್ಲಿ ಇದು ೧.೩ ದಶಲಕ್ಷ ಮೋಟಾರ್ ಬೈಕ್ಗಳನ್ನು ಬಿಡುಗಡೆ ಮಾಡಿತ್ತು.
[ಬದಲಾಯಿಸಿ] ಹೀರೋ ಹೋಂಡ ಸ್ಪ್ಲೆಂಡರ್
ಹೀರೋ ಹೋಂಡ ಸ್ಪ್ಲೆಂಡರ್ ಪ್ರಪಂಚದ ಅತ್ಯಂತ ಹೆಚ್ಚು ಮಾರಾಟವಾಗಿರುವ ಮೋಟಾರ್ ಬೈಕ್. ಇದರ ಎರಡು ಸ್ಥಾವರಗಳು ಭಾರತದ ರಾಜ್ಯ ಹರಿಯಾಣದಲ್ಲಿನ ಧರುಹೆರ ಮತ್ತು ಗುರಗಾಂವ್ ನಗರಗಳಲ್ಲಿವೆ.