From Wikipedia
ಜುಲೈ ೨೪ - ಜುಲೈ ತಿಂಗಳ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೫ನೇ ದಿನ (ಅಧಿಕ ವರ್ಷದಲ್ಲಿ ೨೦೬ನೇ ದಿನ).
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೪೭ - ಬ್ರಿಗ್ಹಮ್ ಯಂಗ್ನ ನೇತೃತ್ವದ ೧೪೮ ಮಾರ್ಮನ್ ಧಾರ್ಮಿಕರು ೧೭ ತಿಂಗಳ ಪ್ರವಾಸದ ನಂತರ ಸಾಲ್ಟ್ ಲೇಕ್ ಕಣಿವೆಯನ್ನು ತಲುಪಿ ಮುಂದೆ ಸಾಲ್ಟ್ ಲೇಕ್ ನಗರದ ಸ್ಥಾಪನೆಗೆ ಕಾರಣೀಭೂತರಾದರು.
- ೧೯೧೧ - ಮೂರನೇ ಹಿರಾಮ್ ಬಿಂಗ್ಹಮ್ ಈಗಿನ ಪೆರುವಿನಲ್ಲಿ ಕಳೆದುಹೋದ ಇಂಕಾ ನಗರವಾದ ಮಾಚು ಪಿಚ್ಚು ಅನ್ನು ಪತ್ತೆಮಾಡಿದ.
- ೧೯೨೩ - ಮೊದಲನೇ ಮಹಾಯುದ್ಧದ ನಂತರದಲ್ಲಿನ ಟರ್ಕಿಯ ಗಡಿಗಳನ್ನು ಲೌಸಾನ್ ಒಪ್ಪಂದದಲ್ಲಿ ನಿರ್ಧರಿಸಲಾಯಿತು.
- ೧೯೬೯ - ಅಪೊಲೊ ಕಾರ್ಯಕ್ರಮದ ಅಪೊಲೊ ೧೧ ಯಶಸ್ವಿಯಾಗಿ ಭೂಮಿಗೆ ಹಿಂದಿರುಗಿತು.
- ೧೯೯೧ - ಭಾರತದ ಸರ್ಕಾರ ತನ್ನ ಹೊಸ ಉದ್ಯಮ ಕಾರ್ಯನೀತಿಯನ್ನು ಘೋಷಿಸಿ ಆರ್ಥಿಕ ಸುಧಾರಣೆಯನ್ನು ಪ್ರಾರಂಭಿಸಿತು.
- ೨೦೦೫ - ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಸತತವಾಗಿ ತನ್ನ ಏಳನೇ ತೂರ್ ದ ಫ್ರಾನ್ಸ್ ಅನ್ನು ಗೆದ್ದನು.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು