Web Analytics Made Easy - Statcounter

See also ebooksgratis.com: no banners, no cookies, totally FREE.

CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಎಸ್.ಕೆ.ಕರೀಂಖಾನ್ - Wikipedia

ಎಸ್.ಕೆ.ಕರೀಂಖಾನ್

From Wikipedia

ಎಸ್.ಕೆ.ಕರೀಂಖಾನ್
ಎಸ್.ಕೆ.ಕರೀಂಖಾನ್

ಎಸ್.ಕೆ.ಕರೀಂಖಾನ್ - ಕರ್ನಾಟಕದ ಖ್ಯಾತ ಜಾನಪದ ತಜ್ಞ ಹಾಗು ಭಾರತದ ಸ್ವಾತಂತ್ರ್ಯ ಹೋರಾಟಗಾರರು.

ಪರಿವಿಡಿ

[ಬದಲಾಯಿಸಿ] ಜೀವನ

ಎಸ್.ಕೆ.ಕರೀಂಖಾನ್ ಅವರ ಜನ್ಮಸ್ಥಳ ಹಾಸನ ಜಿಲ್ಲೆಯ ಸಕಲೇಶಪುರ.

ತಂದೆ ಆಫ್ಘಾನಿಸ್ಥಾನದ ಕಾಬೂಲ್‌ನ ವೀರಯೋಧ ರೆಹಮಾನ್‌ ಖಾನ್‌ ಹಾಗೂ ತಾಯಿ ಸೌದಿ ಅರೇಬಿಯಾ ಮೂಲದ ಜೈನಬಿ. ಈ ದಂಪತಿಯ ಪುತ್ರರಾದ ಕರೀಂಖಾನ್‌ ಅವರು ಓದಿದ್ದು ಮಾತ್ರ ಕೇವಲ ೮ನೇ ತರಗತಿವರೆಗೆ. ಆಚಂಗಿ ನಾರಾಯಣಶಾಸ್ತ್ರಿಗಳ ಶಿಷ್ಯರಾಗಿ ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಬಗ್ಗೆ ಪಾಂಡಿತ್ಯ ಸಿದ್ದಿಸಿಕೊಂಡರು. ಇಲ್ಲಿಂದ ಆರಂಭವಾದ ಅವರ ಜಾನಪದ ಸಾಹಿತ್ಯ ಕೃಷಿ ಅವರ ಹೆಸರನ್ನು ಮೇರು ಎತ್ತರಕ್ಕೆ ಕೊಂಡೊಯ್ದಿತು.

ಚಿತ್ರಗೀತೆಗಳಲ್ಲಿ ಆಧ್ಯಾತ್ಮಿಕತೆ ಬಿಂಬಿಸುವ ತಮ್ಮ ಗೀತೆಗಳ ಮೂಲಕ ಕಪ್ಪು-ಬಿಳುಪಿನ ಕನ್ನಡ ಚಿತ್ರರಂಗದ ಕಾಲದಲ್ಲಿ ತಮ್ಮ ಕೊಡುಗೆಯನ್ನು ದಾಖಲಿಸಿದ್ದರು. ಕರೀಂಖಾನ್‌ ಅವರಿಗೆ ಯಾವತ್ತೂ ಕ್ಷೇತ್ರಗಳ ಗಡಿ ಅಡ್ಡಿಯಾಗಲಿಲ್ಲ. ಪತ್ರಿಕೋದ್ಯಮದಲ್ಲೂ ತಮ್ಮ ಹೆಜ್ಜೆ ಗುರುತು ದಾಖಲಿಸಿದರು. ಧಾರವಾಡದ ಲೋಕಮಿತ್ರ, ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರಾಗಿ ದುಡಿದರು. ಇದಕ್ಕೆ ಮುನ್ನ ರಾಯಲ್‌ ಇಂಡಿಯನ್‌ ನೇವಿಯಲ್ಲಿ ನೌಕರಿ ಮಾಡಿದ್ದರು. ಅಜ್ಞಾತ ಕವಿಗಳ ನೂರಾರು ಹಾಡುಗಳು ಕಳೆದು ಹೋಗಬಾರದೆಂದು ಅವುಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅದಕ್ಕಾಗಿ ಅವರು ಸಾಕಷ್ಟು ಕಷ್ಟಪಟ್ಟರು. ಅದಾಗ್ಯೂ, ಸ್ವತಃ ಕರೀಂಖಾನ್‌ ಅವರ ನೂರಾರು ಹಸ್ತಪ್ರತಿಗಳು ಪ್ರಕಟವಾಗಲಿಲ್ಲ. ಅವರ ಅಲೆಮಾರಿ ಬದುಕಿನಲ್ಲಿ ಅವು ಕಳೆದುಹೋದವು ಎಂದು ತಿಳಿದುಬಂದಿದೆ.

ಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿ ತಿರುಗಿ ನೂರಾರು ಜಾನಪದ ಗೀತೆಗಳನ್ನು ಸಂಗ್ರಹಿಸಿದ ಕರೀಂಖಾನ್ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು ೮ ಸಾವಿರ ಕಿ.ಮೀ. ದೂರವನ್ನು ಸುತ್ತಿ ಜಾನಪದ ಪ್ರದರ್ಶನ ಕಲೆಗಳ ಕುರಿತು ೨೪೦ ಗಂಟೆಗಳ ಅವಧಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

"ಬೇರೆಯವರಿಗೆ ಕೆಡುಕು ಬಯಸದಿರುವುದು", "ಕೆಟ್ಟ ಯೋಚನೆ ಮಾಡದಿರುವುದು" ತಮ್ಮ ಆರೋಗ್ಯದ ಗುಟ್ಟೆಂದು ನಂಬಿಕೊಂಡು, ಪ್ರತಿಪಾದಿಸುತ್ತಿದ್ದ ಕರೀಂಖಾನ್‌ ಅವರಿಗೆ ಬದುಕಿನ ಕೊನೆಯ ದಿನಗಳಲ್ಲಿ ದೀರ್ಘಕಾಲೀನ ಅನಾರೋಗ್ಯ ಕಾಡಿತು. ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನೂ ತಿರಸ್ಕರಿಸಿದ್ದ ಕರೀಂಖಾನ್‌ ಅವರು ತಮ್ಮ ಬದುಕಿನುದ್ದಕ್ಕೂ ಎಷ್ಟೇ ಕಷ್ಟ ಎದುರಾದರೂ ಯಾರೊಬ್ಬರ ಮುಂದೆಯೂ ಕೈಚಾಚದೆ ಆತ್ಮಗೌರವ ಕಾಯ್ದುಕೊಂಡರು. ತಮ್ಮ ಇಳಿವಯಸ್ಸಿನಲ್ಲಿ ಕರೀಮಜ್ಜ ಎಂದೇ ಮಾಧ್ಯಮಗಳಲ್ಲಿ, ಸಾಮಾನ್ಯ ಜನರಲ್ಲಿ, ಪ್ರೀತಿಗೆ ಪಾತ್ರರಾಗಿದ್ದರು.


[ಬದಲಾಯಿಸಿ] ಚಿತ್ರರಂಗ

ಕನ್ನಡ ಚಿತ್ರರಂಗ ಖ್ಯಾತ ಚಿತ್ರಸಾಹಿತಿಯಾಗಿ ಕರೀಂಖಾನ್ ಹೆಸರು ಗಳಿಸಿದ್ದರು. ಚಿತ್ರಗೀತೆ ರಚನೆಯಷ್ಟೇ ಅಲ್ಲದೆ, ಚಲನಚಿತ್ರ ಕಥೆ, ಸಂಭಾಷಣೆಗಳನ್ನೂ ಬರೆದು ಪೂರ್ಣಪ್ರಮಾಣದ ಚಿತ್ರಸಾಹಿತಿಯೆನಿಸಿದ್ದರು.

೧೯೬೨ರಲ್ಲಿನ ಸ್ವರ್ಣಗೌರಿ ಚಲನಚಿತ್ರದ ಕಥೆ ಮತ್ತು ಸಂಭಾಷಣೆ ಬರೆದು, ಗೀತೆರಚನೆಯನ್ನು ಮಾಡಿದ್ದರು. ಇದಲ್ಲದೆ, ಜೀವನ ತರಂಗ, ಗಂಗೆ ಗೌರಿ ಚಿತ್ರಕ್ಕೆ ಗೀತೆಗಳನ್ನು ರಚಿಸಿದ್ದಾರೆ.


[ಬದಲಾಯಿಸಿ] ಎಸ್.ಕೆ.ಕರೀಂಖಾನ್ ರಚಿತ ಕೆಲವು ಗೀತೆಗಳು

[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು

ಕರೀಂಖಾನ್‌ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ೧೯೮೯ ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತು. ೨೦೦೪ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿತು. ಅಲ್ಲದೆ, ೧೯೯೭ರಲ್ಲಿ ನಾಡೋಜ, ೧೯೯೫ರಲ್ಲಿ ಜಾನಪದಶ್ರೀ, ಜೀಶಂಪ ಪ್ರಶಸ್ತಿ, ೨೦೦೦ರಲ್ಲಿ ಚಿ.ಉದಯಶಂಕರ್ ಚಿತ್ರ ಸಾಹಿತ್ಯ ಪ್ರಶಸ್ತಿ, ೧೯೮೯ರಲ್ಲಿ ಜಾನಪದ ಅಕಾಡೆಮಿ ಗೌರವ, ಹಂಸರತ್ನ, ಜಾನಪದ ಜಂಗಮ ಹಾಗೂ ಚಲನಚಿತ್ರ ರಂಗದ ಜೀವಮಾನದ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

[ಬದಲಾಯಿಸಿ] ನಿಧನ

ಎಸ್.ಕೆ.ಕರೀಂಖಾನ್ ಅವರು ಜುಲೈ ೨೯, ೨೦೦೬ರಂದು ಬೆಂಗಳೂರಿನ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

[ಬದಲಾಯಿಸಿ] ಹೊರಗಿನ ಸಂಪರ್ಕಗಳು


ಕನ್ನಡ ಚಿತ್ರರಂಗದ ಚಿತ್ರಸಾಹಿತಿಗಳು

ಬೆಳ್ಳಾವೆ ನರಹರಿ ಶಾಸ್ತ್ರಿ | ಹುಣಸೂರು ಕೃಷ್ಣಮೂರ್ತಿ | ಚಿ.ಸದಾಶಿವಯ್ಯ | ಸೋರಟ್ ಅಶ್ವಥ್ | ಕು.ರಾ.ಸೀತಾರಾಮಶಾಸ್ತ್ರಿ | ಜಿ.ವಿ.ಅಯ್ಯರ್ | ಕಣಗಾಲ್ ಪ್ರಭಾಕರ ಶಾಸ್ತ್ರಿ | ಚಿ.ಉದಯಶಂಕರ್ | ಆರ್.ಎನ್.ಜಯಗೋಪಾಲ್ | ವಿಜಯ ನಾರಸಿಂಹ | ಕರೀಂಖಾನ್ | ದೊಡ್ಡರಂಗೇಗೌಡ | ಪಿ.ಲಂಕೇಶ್ | ಹಂಸಲೇಖ | ವಿ.ಮನೋಹರ್ | ಕೆ.ಕಲ್ಯಾಣ್ | ವಿ.ನಾಗೇಂದ್ರ ಪ್ರಸಾದ್ | ಕವಿರಾಜ್ | ಎಸ್.ನಾರಾಯಣ್ | ಉಪೇಂದ್ರ | ರವಿಚಂದ್ರನ್ | ಪ್ರೇಂ | ನಾಗತಿಹಳ್ಳಿ ಚಂದ್ರಶೇಖರ್


aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -